ʼಮಹಾನಟಿʼ ಕೀರ್ತಿ ಸುರೇಶ್‌ಗೆ ಕೋವಿಡ್ ಪಾಸಿಟಿವ್
ಚೆನೈ : ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ಕೀರ್ತಿ ಸುರೇಶ್ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಮೂರನೇ ಅಲೆಯ ಅಬ್ಬರ ಹೆಚ್ಚಾಗಿದೆ. ಸಮುದಾಯಕ್ಕೆ ಹರಡಿರುವ ಈ ಸೋಂಕು ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಉಂಟು ಮಾಡಲಿದೆ.
ಕೋವಿಡ್ ಪಾಸಿಟೀವ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕೀರ್ತಿ ಸುರೇಶ್, ಎಲ್ಲರಿಗೂ ನಮಸ್ಕಾರ, ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಾನು ಎಲ್ಲಾ ರೀತಿಯ ಮುನ್ನೆಚರಿಕೆಗಳನ್ನು ಪಾಲಿಸಿದ್ದರೂ ಕೂಡ ನನಗೆ ಸೋಂಕಿನ ಸೌಮ್ಯ ಗುಣ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ವೈರಸ್ ಹರಡುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ, ದಯವಿಟ್ಟು ಎಲ್ಲರೂ ಮುಂಜಾಗ್ರತೆ ವಹಿಸಿ, ಯಾರು ಇನ್ನು ಲಸಿಕೆ ಪಡೆದಿಲ್ಲವೋ ದಯವಿಟ್ಟು ಲಸಿಕೆ ಪಡೆಯಿರಿ.
ಲಸಿಕೆ ಹಾಕಿಸಿಕೊಂಡವರಿಗೆ ಈ ಸೋಂಕಿನ ತೀವ್ರತೆ ಕಮ್ಮಿ ಇರುತ್ತದೆ. ಬೇಗ ಗುಣಮುಖರಾಗಬಹುದು. ನಿಮ್ಮ ಆರೋಗ್ಯಕ್ಕಾಗಿ ದಯವಿಟ್ಟು ಲಸಿಕೆಗಳನ್ನು ಬೇಗ ತೆಗೆದುಕೊಳ್ಳಿ. ನಾನು ಬೇಗ ಚೇತರಿಸಿಕೊಂಡು ಬೇಗ ಕೆಲಸಕ್ಕೆ ಮರಳುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಂ ಅಲ್ಲಿ ಪೋಸ್ಟ್ ಮಾಡಿದ್ದಾರೆ.