ಮಹಿಳಾ ಪ್ರಧಾನ ನಾಯಕಿಯಾಗಿ ನ್ಯಾಷನಲ್ ಕ್ರಶ್
ಹೈದರಾಬಾದ್: ಹೀರೋಯಿನ್ ಆಗಿ ರಶ್ಮಿಕಾ ನಸೀಬೆ ಬದಲಾಗಿದೆ. ಟಾಲಿವುಡ್‌ಗೆ ಛಲೋ ಸಿನಿಮಾ ಮೂಲಕ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿವರೆಗೂ ಬಿರುಗಾಳಿ ಹಾಗೆ ಒಂದಾದ ಮನೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಪ್ರಸ್ತುತ ರಶ್ಮಿಕಾ ಕೈಯಲ್ಲಿ ನಾಲ್ಕು ಸಿನಿಮಾಗಳಿದ್ದು ಅದರ ಜೊತೆಗೆ ಮತ್ತೊಂದು ಸಿನಿಮಾಗೆ ಓಕೆ ಹೇಳಿರೋದಾಗಿ ಸುದ್ದಿ ಹರಿದಾಡ್ತಿದೆ.
ಅದು ಕೂಡ ಲೇಡಿ ಓರಿಯೆಂಟೆಡ್ ಸಿನಿಮಾ ಮಾಡ್ತಿರೋದಾಗಿ ಮಾಹಿತಿಯಿದೆ. ಪ್ರತಿಯೊಬ್ಬ ನಟಿಗೂ ಮಹಿಳಾ ಪ್ರಧಾನ ನಾಯಕಿಯಾಗಿ ನಟಿಸುವ ಆಸೆ ಇರುತ್ತೆ ಆದ್ರೆ ಅದು ಸಾಧ್ಯವಾಗಲ್ಲ. ಅನುಷ್ಕಾ ಶೆಟ್ಟಿ, ಸಮಂತಾ, ಕೀರ್ತಿ ಸುರೇಶ್ ಸಾಲಿಗೆ ಸೇರಲು ರಶ್ಮಿಕಾ ಮಂದನ್ಣ ಪಣ ತೊಟ್ಟಿದ್ದಾರೆ. ನಿರ್ದೇಶಕ ರಾಹುಲ್ ರವೀಂದ್ರನ್ ಹೇಳಿದ ಲೇಡಿ ಓರಿಯೆಂಟೆಡ್ ಕಥೆ ಕೇಳಿ ರಶ್ಮಿಕಾ ಓಕೆ ಹೇಳಿದ್ದಾರಂತೆ. ರಾಹುಲ್ ನಿರ್ದೇಶನದಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿಯಿದೆ.
ಈ ಸಿನಿಮಾ ಹಿಟ್ ಆದ್ರೆ ನ್ಯಾಷನಲ್ ಕ್ರಷ್ ಟಾಪ್ ಲೆವೆಲ್ ಹೀರೋಯಿನ್ ಆಗೋದ್ರಲ್ಲಿ ಆಶ್ಚರ್ಯಾನೆ ಇಲ್ಲ ಅಂತಿದಾರೆ ಸಿನಿಮಾ ಮಂದಿ. ಪ್ರಸ್ತುತ ಪುಷ್ಟ ಸಿನಿಮಾದ ಶ್ರೀವಲ್ಲಿಯಾಗಿ ಪ್ರೇಕ್ಷಕರ ಮನಗೆದ್ದಿರುವ ರಶ್ಮಿಕಾ ಮುಂದೆ ಶರ್ವಾನಂದ್ ಜೊತೆ ನಟಿಸಲಿದ್ದಾರೆ. ಜೊತೆಗೆ ಬಾಲಿವುಡ್ ಸಿನಿಮಾಗೆ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾಗಿ ಮಾಹಿತಿಯಿದೆ.