ಮೇಕೆದಾಟು ಪಾದಯಾತ್ರೆ ವಿರುದ್ಧ ಹೈ ಕೋರ್ಟ್‌ಗೆ PIL ಸಲ್ಲಿಕೆ
ಬೆಂಗಳೂರು : ಕೆಪಿಸಿಸಿ ಪಾದಯಾತ್ರೆಯಿಂದ ಕೊರೊನಾ ಹೆಚ್ಚುತ್ತಿದೆ. ಸರ್ಕಾರ ಪಾದಯಾತ್ರೆಗೆ ಯಾವ ಕ್ರಮವನ್ನು ಜರುಗಿಸಿಲ್ಲ. ನಾಯಕರು ಮಾಸ್ಕ್ ಇಲ್ಲದೇ ಓಡಾಟ ನಡೆಸಿದ್ದಾರೆ, ಮಕ್ಕಳನ್ನು ಭೇಟಿ ಮಾಡುತ್ತಿದ್ದಾರೆ ಇದರಿಂದ ಕೊರೊನಾ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಹೈ ಕೋರ್ಟ್‌ಗೆ PIL ಸಲ್ಲಿಸಲಾಗಿದೆ.
ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಿದೆ. ಆದರೆ ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ವೇಗ ಪಡೆದುಕೊಳ್ಳಲಿದೆ ಎಂದು ಪಿಐಎಲ್ ಸಲ್ಲಿಸಲಾಗಿದೆ. ಇನ್ನು ಇದನ್ನು ತುರ್ತಾಗಿ ವಿಚಾರಣೆ ಮಾಡುವಂತೆ ವಕೀಲ ಶ್ರೀಧರ್ ಪ್ರಭು ಮನವಿ ಮಾಡಿದ್ದಾರೆ.
ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿರುವ ಬಗ್ಗೆ ಸಿದ್ದೃಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ. ಏನಾಗುತ್ತೋ ನೋಡೋಣ, ಕೋರ್ಟ್ ವಿಚಾರಣೆ ಆಗಿ ಕೋರ್ಟ್ ಆದೇಶ ಬರಲಿ ನಂತರ ಮಾತಾಡ್ತೀನಿ ಅಂದಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.