ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷ; ಪವಿತ್ರಾ ಗೌಡ ಪೋಸ್ಟ್‌ಗೆ ದರ್ಶನ್ ಪತ್ನಿ ಕೌಂಟರ್
ಬೆಂಗಳೂರು; ಪವಿತ್ರಾಗೌಡ ಅವರು ಇನ್ಸ್ಟಾಗ್ರಾಂನಲ್ಲಿ ನಟ ದರ್ಶನ್ ಜೊತೆಗಿನ ಫೋಟೋಗಳ ಕೊಲಾಜ್ ಹಾಕಿ, ನಮ್ಮ ರಿಲೇಶನ್‌ಶಿಪ್‌ಗೆ ಹತ್ತು ವರ್ಷ ಎಂದು ಬರೆದುಕೊಂಡಿದ್ದಾರೆ. ಇದು ದರ್ಶನ್ ಪತ್ನಿ ವಿಜಯಲಕ್ಷ್ಮೀಯ ಕೆಂಗಣ್ಣಿಗೆ ಗುರಿಯಾಗಿದೆ. ವಿಜಯಲಕ್ಷ್ಮೀಯವರು ಪವಿತ್ರಾಗೌಡ ಕೌಂಟರ್ ಕೊಡುತ್ತಾ ಅವರೂ ಒಂದು ಪೋಸ್ಟ್ ಮಾಡಿದ್ದಾರೆ.
ಪವಿತ್ರಾಗೌಡ ಪೋಸ್ಟ್ ನೋಡಿ ಆಕ್ರೋಶಗೊಂಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀಯವರು, ಪವಿತ್ರಾ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆಗೆ ಇರಬೇಕು ಅನ್ನೋದು ನನ್ನ ಭಾವನೆ. ಆಕೆಯ ಪೋಸ್ಟ್ ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಿಜ ಹೇಳಬೇಕಂದ್ರೆ ನಾನು ವಿನಾಕಾರಣ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ಸಾಮಾಜಿಕ ಜಾಲತಾಣಗಳನ್ನು ಅದಕ್ಕಾಗಿ ಬಳಸಿಕೊಳ್ಳುವುದಿಲ್ಲ. ಆದ್ರೆ, ನನ್ನ ಕುಟುಂಬದ ಹಿತದೃಷ್ಟಿಯಿಂದ ನನಗೆ ಧ್ವನಿ ಎತ್ತುವ ಸಮಯ ಬಂದಿದೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ. ಇದನ್ನು ಸಂಜಯ್ ಸಿಂಗ್, ಖುಷಿ ಗೌಡ, ಶಾನ್ವಿ ಸಂಸೂರಿ ಹಾಗೂ ಪವಿತ್ರಾ ಗೌಡ ಅಕೌಂಟ್ಗೆ ಟ್ಯಾಗ್ ಕೂಡಾ ಮಾಡಿದ್ದಾರೆ.