ಬೀಚ್‌ನಲ್ಲಿ ಪಲ್ಟಿ ಹೊಡೆಯುವಾಗ ನಟ ದಿಗಂತ್‌ಗೆ ಬಲವಾದ ಪೆಟ್ಟು; ಬೆಂಗಳೂರಿಗೆ ಏರ್‌ಲಿಫ್ಟ್
ಬೆಂಗಳೂರು; ಪತ್ನಿಯ ಐದ್ರಿತಾ ಜೊತೆ ಗೋವಾ ಪ್ರವಾಸ ಕೈಗೊಂಡಿದ್ದ ನಟ ದಿಗಂತ ಎಡವಟ್ಟು ಮಾಡಿಕೊಂಡಿದ್ದಾರೆ. ಗೋವಾ ಬೀಚ್‌ನಲ್ಲಿ ಪಲ್ಟಿ ಹೊಡೆಯುವಾಗ ಅವರ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಅವರನ್ನು ಹೆಚ್ಚಿಗೆ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆತರಲಾಗಿದೆ.
ಪ್ರವಾಸಕ್ಕೆಂದು ದಿಗಂತ್ ತನ್ನ ಪತ್ನಿ ಐಂದ್ರಿತಾ ಜೊತೆ ಗೋವಾಕ್ಕೆ ತೆರಳಿದ್ದರು. ಈ ವೇಳೆ ಬೀಚ್‌ನಲ್ಲಿ ಅವರು ಪಲ್ಟಿ ಹೊಡೆಯುತ್ತಾ ಮೋಜುಮಾಡುತ್ತಿದ್ದರು. ಆಗ ಆಯತಪ್ಪಿ ಅವರು ಬಿದ್ದಿದ್ದು, ಅವರ ಕತ್ತಿಗೆ ಬಲವಾದ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕೂಡಲೇ ಏರ್‌ಲಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.