Cinema

ನಟಿ ಸಮಂತಾ ವಿರುದ್ಧ ದೂರು, ಯಾಕೆ ಗೊತ್ತಾ?

ಹೈದ್ರಾಬಾದ್‌:ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ನಟಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಸೋಶಿಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.
ಹಾಡಿನ ಲಿರಿಕಲ್ ವಿಡಿಯೋ ಹಾಗೂ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ಯೂಟ್ಯೂಬ್‌ನಲ್ಲಿ ಹಾಡು ದಾಖಲೆಯ ವೀವ್ಸ್ ಪಡೆದಿದೆ. ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆದರೆ ಈ ಹಾಡಿನ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಡಿನ ವಿರುದ್ಧ ಹಾಗೂ ಸಿನಿಮಾದ ಸಂಗೀತ ನಿರ್ದೇಶಕರು, ಹಾಡಿನ ಸಾಹಿತ್ಯ ಬರೆದವರು ಹಾಗೂ ಸ್ವತಃ ಸಮಂತಾ ವಿರುದ್ಧ ದೂರು ನೀಡಿದ್ದಾರೆ.

ಹಾಗೇ ಊ ಅಂಟಾವ ಮಾವ ಊ ಹು ಅಂಟಾವ’ ಎಂಬ ಹಾಡಿಗೆ ಸಮಂತಾ ನರ್ತಿಸಿದ್ದು, ಹಾಡಿನಲ್ಲಿ ಪುರುಷರನ್ನು ಛೇಡಿಸುವ ರೀತಿಯ ಸಾಹಿತ್ಯ ಇದೆ. ಇದರ ಬಗ್ಗೆ ತಕರಾರು ತೆಗೆದಿರುವ ಪುರುಷರ ಸಂಘವೊಂದು ಆಂಧ್ರಪ್ರದೇಶದ ಕೆಳನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಹಾಡನ್ನು ರದ್ದು ಮಾಡಬೇಕು, ಹಾಡು ಚಿತ್ರಮಂದಿರಗಳಲ್ಲಿ ಪ್ರಸಾರವಾಗಬಾರದಂತೆ ತಡೆ ಹಿಡಿಯಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಸಮಂತಾ ನರ್ತಿಸಿರುವ ಪುಷ್ಪ ಸಿನಿಮಾದ ‘ಹೂ ಅಂಟಾವ ಮಾವ ಊ ಹು ಅಂಟಾವ’ ಹಾಡಿನಲ್ಲಿ ಪುರುಷರನ್ನು ಮಹಿಳಾ ಪೀಡಕರು, ಕಾಮಾತುರತೆ ಉಳ್ಳುವರು ಎಂಬಂತೆ ಹೇಳಲಾಗಿದೆ. ಇದು ಪುರುಷರಿಗೆ ಅಪಮಾನ ಉಂಟು ಮಾಡುತ್ತಿದೆ. ಹಾಗಾಗಿ ಈ ಹಾಡನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

 

Share Post