CinemaDistrictsLifestyle

ಕಟೀಲು ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾಂತಾರಾ ನಟಿ

ಕಟೀಲು; ಕಾಂತಾರಾ ಸಿನಿಮಾದಲ್ಲಿ ನಾಯಕಿಯಾಗಿ ನಟನೆ ಮಾಡಿದ ನಂತರ ಸಪ್ತಮಿ ಗೌಡಗೆ ಹಣೆಬರಹವೇ ಬದಲಾಗಿಬಿಟ್ಟಿದೆ. ಅವರೀಗ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಕಾಂತಾರಾ ಸಿನಿಮಾ ಸಕ್ಸಸ್‌ನಿಂದ ಖುಷಿಯಾಗಿರುವ ಸಪ್ತಮಿ ಗೌಡ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಇಂದು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಇದಕ್ಕೂ ಮೊದಲು ಸಪ್ತಮಿ ಗೌಡ ಅವರು ಕೊರಗಜ್ಜ, ಗುಳಿಗ ಸನ್ನಿಧಿಗೆ ಭೇಟಿ ನೀಡಿದ್ದರು. ಇದೀಗ ಕಟೀಲು ದರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅರ್ಚಕರು ಸಪ್ತಮಿ ಅವರಿಗೆ  ದೇವರ ವಿಶೇಷ ವಸ್ತ್ರ ನೀಡಿ ಗೌರವಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ನಟಿ ಸಪ್ತಮಿ ಗೌಡ, ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.  ದೈವರಾಧನೆ ಬಗ್ಗೆ ಮೊದಲು ನನಗೆ ತಿಳಿದಿರಲಿಲ್ಲ, ಕಾಂತಾರಾ ಚಿತ್ರೀಕರಣ ವೇಳೆ ಈ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.

 

 

 

Share Post