CinemaNational

ನಟ ಮಹೇಶ್‌ ಬಾಬು ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಇನ್ನಿಲ್ಲ

ಹೈದರಾಬಾದ್‌; ನಿನ್ನೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ಟಾಲಿವುಡ್‌ ಹಿರಿಯ ನಟ ಹಾಗೂ ನಟ ಮಹೇಶ್‌ ಬಾಬು ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಕೃಷ್ಣ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ರಾತ್ರಿ ಸೂಪರ್‌ ಸ್ಟಾರ್‌ ಕೃಷ್ಣ ಅವರಿಗೆ ಬಹು ಅಂಗಾಂಗ ವೈಫಲ್ಯವಾಗಿ, ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ದೊಡ್ಡ ತಜ್ಞ ವೈದ್ಯರ ತಂಡವೇ ಅವರ ಸುಶ್ರೂಶೆಯಲ್ಲಿ ತೊಡಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣ ಸಾವನ್ನಪ್ಪಿದ್ದಾರೆ.

ಒಂದೇ ವರ್ಷದಲ್ಲಿ ನಟ ಮಹೇಶ್‌ ಮನೆಯಲ್ಲಿ ಮೂರು ಸಾವಾಗಿದೆ. ಜನವರಿ ತಿಂಗಳಲ್ಲಿ ಮಹೇಶ್‌ ಬಾಬು ಅವರ ಸಹೋದರ ರಮೇಶ್‌ ಬಾಬು ಸಾವನ್ನಪ್ಪಿದ್ದರು. ಇದಾದ ಮೇಲೆ ಸೆಪ್ಟೆಂಬರ್‌ನಲ್ಲಿ ಮಹೇಶ್‌ ಬಾಬು ತಾಯಿ, ಕೃಷ್ಣ ಪತ್ನಿ ಇಂದಿರಾ ಅವರೂ ನಿಧನರಾಗಿದ್ದರು. ಇದಾದ ಎರಡು ತಿಂಗಳಿಗೆ ಸೂಪರ್‌ ಸ್ಟಾರ್‌ ಕೃಷ್ಣ ಕೂಡಾ ಇಹಲೋಕ ತ್ಯಜಿಸಿದ್ದಾರೆ. ಸೂಪರ್‌ ಸ್ಟಾರ್‌ ಕೃಷ್ಣ ಎಂಬತ್ತರ ದಶಕದಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣ ಅವರು ನಾಯಕ ನಟರಾಗಿ ನಟಿಸಿದ್ದರು. ಅದ್ದೂರಿ ಚಿತ್ರಗಳನ್ನು ಮಾಡುವುದರಲ್ಲಿ ಕೃಷ್ಣ ಹೆಸರಾಗಿದ್ದರು.

Share Post