BengaluruCinemaCrime

ಚಿತ್ರ ನಿರ್ಮಾಪಕನ ವಿರುದ್ಧ ಲವ್ ಸೆಕ್ಸ್‌ ದೋಖಾ ಆರೋಪ

ಬೆಂಗಳೂರು; ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆಂದು ಹೇಳಿ ಹಣ ಪಡೆದಿದ್ದಲ್ಲದೆ, ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆಂದು ನಟಿಯೊಬ್ಬರು ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊಟಗಾನಹಳ್ಳಿ ರಾಮಯ್ಯ ಅವರುವ ಬರೆದ ಕಥೆಯನ್ನಾಧರಿಸಿ ‘ದಿ ಕಲರ್ಸ್ ಆಫ್ ಟೊಮ್ಯಾಟೊ’ ಎಂಬ ಸಿನಿಮಾವನ್ನು ಕೆಲ ದಿನಗಳ ಹಿಂದೆ ಸೆಟ್ಟೇರಿಸಲಾಗಿತ್ತು. 1 ಟು 100 ಡ್ರೀಮ್ ಮೂವೀಸ್ ಬ್ಯಾನರ್ ಅಡಿ ಕುಮಾರ್ ಎಂಬುವವರು ಈ ಚಿತ್ರದ ನಿರ್ಮಾಣಕ್ಕಿಳಿದಿದ್ದರು. ಈ ಕುಮಾರ್‌ ಅವರೇ ನಟಿಯನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ.

ನಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡು ಬಂದಿದ್ದೆ. ಈ ವೇಳೆ ಪರಿಚಯವಾದ ಕುಮಾರ್‌, ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹೇಳದ್ದರು. ನನ್ನಿಂದ 75 ಲಕ್ಷ ರೂಪಾಯಿ ಪಡೆದಿದ್ದರು. ಸಿನಿಮಾ ಹಿಟ್‌ ಆಗುತ್ತದೆ. ಆಗ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಆದ್ರೆ ಅವರು ನನಗೆ ದುಡ್ಡು ಕೊಡಲಿಲ್ಲ. ಬದಲಾಗಿ, ನಿನಗೆ ಬಾಳು ಕೊಡುತ್ತೇನೆ ಎಂದು ನನ್ನನ್ನು ಬಳಸಿಕೊಂಡಿದ್ದಾರೆ ಎಂದು ನಟಿ ಆರೋಪ ಮಾಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post