Cinema

ಅಪ್ಪು ಜನ್ಮದಿನದಂದೇ ʼಜೇಮ್ಸ್‌ʼ ರಿಲೀಸ್ ?

ಬೆಂಗಳೂರು : ಪುನೀತ್‌ ರಾಜ್ ಕುಮಾರ್‌ ಅವರು ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್‌ ತನ್ನ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದೆ. ನಿರ್ದೇಶಕ ಚೇತನ್‌ ಕುಮಾರ್‌ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಚಿತ್ರ ಅಪ್ಪು ಅಭಿಮಾನಿಗಳ  ನಿರೀಕ್ಷೆಯನ್ನು ದುಪ್ಪಟ್ಟುಗಳಿಸಿದೆ.

ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ ಮಾರ್ಚ್‌ 17ಅನ್ನು ಮನಸಿನಲ್ಲಿ ಇಟ್ಟುಕೊಂಡೇ ಹಗಲಿರುಳು ಕೆಲಸ ಮಾಡುತ್ತಿದೆ. ಚಿತ್ರದ ರಿಲೀಸ್‌ ಡೇಟ್‌ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಗಾಂಧಿನಗರದ ಪಂಡಿತರು ಮಾತನಾಡುತ್ತಿದ್ದಾರೆ.

ಹೊಸಪೇಟೆ ಉದ್ಯಮಿ ಕಿಶೋರ್‌ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇನ್ನು ಅಪ್ಪು ಅವರು ಅಹಲುವ ಮುನ್ನ ಅವರ ಭಾಗದ ಚಿತ್ರೀಕರಣ ಮುಗಿಸಿದ್ದರು ಆದರೆ ಡಬ್ಬಿಂಗ್‌ ಮಾತ್ರ ಉಳಿದಿತ್ತು. ಈಗ ಡಬ್ಬಿಂಗ್‌ ಅನ್ನು ಯಾರಿಂದ ಮಾಡಿಸಲಾಗುವುದು ಎಂಬ ಪ್ರಶ್ನೆ ಹರಿದಾಡುತ್ತಿದೆ.

ಇನ್ನು ಮಾರ್ಚ್ 18 ಕ್ಕೆ RRR ಸಿನಿಮಾ ಕೂಡ ರಿಲೀಸ್‌ ಆಗುವ ಸಾಧ್ಯತೆ ಹೆಚ್ಚಿದೆ. ಎಲ್ಲವೂ ಕೊರೊನಾ ಮೇಲೆ ಅವಲಂಬಿತವಾಗಿದೆ.

Share Post