8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ: ವಾಹನ ಸಂಚಾರ ಸ್ಥಗಿತ
ಬೆಂಗಳೂರು: ೮ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು ಗೇಟ್ ವೇ ಫ್ಲೈಓವರ್‌ನ ರೋಪ್ ವೇ ಕಟ್ಟಾಗಿ ಸಂಚಾರ ಸ್ಥಗಿತಗೊಂಡಿದ್ದು, ಎಂಜಿನಿಯರ್ ಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಗೊರಗುಂಟೆ ಪಾಳ್ಯ ಹಾಗೂ ನೆಲಮಂಗಲ ಎಲಿವೇಟೆಡ್ ರಸ್ತೆಯಲ್ಲಿ ರೋಪ್‌ಗಳ ಬಿರುಕು ಕಂಡುಬಂದಿದ್ದು ಘಟನೆ ಸಂಭವಿಸಿದೆ. ಫ್ಲೈಓವರ್‌ನಲ್ಲಿ ರೋಪ್‌ಗಳದ್ದೆ ಮಹತ್ವದ ಪಾತ್ರ ಇರುತ್ತದೆ. ಇದೀಗ ಪಿಲ್ಲರ್ 101 ಹಾಗೂ 102 ರ ನಡುವಿನ ರೋಪ್ ಸಡಿಲ ಆಗಿದೆ. ತಕ್ಷಣ ಎಚ್ಚೆತ್ತ ಟೋಲ್ ಆಡಳಿತ ಮಂಡಳಿ ಫ್ಲೈಓವರ್ ಸಂಚಾರ ಬಂದ್ ಮಾಡಿದೆ. ಸರ್ವೀಸ್ ರಸ್ತೆಯಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ NHAI ಅಧಿಕಾರಿಗಳು ಹಾಗೂ ಪೀಣ್ಯ ಪೊಲೀಸರು ದೌಡಾಯಿಸಿದ್ದಾರೆ.