CinemaNational

ಕಾಂಗ್ರೆಸ್‌ ಪಕ್ಷ ಸೇರ್ತಾರಂತೆ ಖ್ಯಾತ ನಟಿ ತ್ರಿಷಾ..!

ಚೆನ್ನೈ; ಖ್ಯಾತ ಬಹುಭಾಷಾ ನಟಿ ತ್ರಿಷಾ ರಾಜಕೀಯ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದು, ತಮಿಳುನಾಡಿನಲ್ಲಿ ಅವ್ರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇತ್ತೀಚೆಗೆ ಅವರಿಗೆ ಸಿನಿಮಾನದಲ್ಲಿ ಅವಕಾಶಗಳು ಕಡಿಮೆಯಾಗಿವೆ. ಈ ಬೆನ್ನಲ್ಲೇ ಅವರು ರಾಜಕೀಯಕ್ಕೆ ಸೇರಲು ನಿರ್ಧಾರ ಮಾಡಿದ್ದು, ರಾಹುಲ್‌ ಗಾಂಧಿ ತಮಿಳುನಾಡು ಪ್ರವಾಸದ ವೇಳೆ ತ್ರಿಷಾ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರವನ್ನು ತಮಿಳುನಾಡು ಕಾಂಗ್ರೆಸ್‌ ಸಮಿತಿ ಮೂಲಗಳೇ ಖಚಿತಪಡಿಸುತ್ತಿವೆ. ತ್ರಿಷಾ ಅವರ ಈ ನಿರ್ಧಾರ ಕೇಳಿ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಪ್ರಬಲವಾಗಿವೆ. ಈ ಪಕ್ಷಗಳಿಗೆ ಸೇರುವುದು ಬಿಟ್ಟು ಕಾಂಗ್ರೆಸ್‌ಗೆ ಏಕೆ ಸೇರುತ್ತಿದ್ದಾರೆ ಎಂಬ ಪ್ರಶ್ನೆ ತ್ರಿಷಾ ಅಭಿಮಾನಿಗಳದ್ದು.

ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್‌ ಸಿನಿಮಾದಲ್ಲಿ ನಟಿ ತ್ರಿಷಾ ನಟಿಸಿದ್ದರು. ಪುನೀತ್ ನಟಿಸಬೇಕಿದ್ದ ‘ದ್ವಿತ್ವ’ ಚಿತ್ರಕ್ಕೂ ತ್ರಿಷಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ, ಸಿನಿಮಾ ಸೆಟ್ಟೇರುವ ಮೊದಲೇ ಪುನೀತ್ ನಿಧನ ಹೊಂದಿದರು.

Share Post