CrimeNational

ರೀಲ್ಸ್‌ಗೆ ಪೋಸ್‌ ಕೊಡುವಾಗ ನಿಯಂತ್ರಣ ತಪ್ಪಿದೆ ಬೈಕ್‌; ಸವಾರ ಸಾವು!

ಮುಂಬೈ; ಬೈಕ್‌ನಲ್ಲಿ ಹೋಗುವಾಗ ರೀಲ್ಸ್‌ ಮಾಡಲು ಹೋಗಿ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ.. ಹಿಂಬದಿಯ ಸವಾರ ರೀಲ್ಸ್‌ ಮಾಡಿದ್ದು, ಸವಾರನಿಗೆ ಕ್ಯಾಮರಾ ಕಡೆ ನೋಡುವಂತೆ ಹೇಳಿದ್ದಾನೆ.. ಈ ವೇಳೆ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

ಮಹಾರಾಷ್ಟ್ರದ ಪುಣೆ ಧುಳೆ-ಸೋಲಾಪುರ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಇಬ್ಬರೂ ಹೆಲ್ಮೆಟ್‌ ಇಲ್ಲದೆ ಬೈಕ್‌ ನಲ್ಲಿ ಹೋಗುತ್ತಿದ್ದರು.. ಜೊತೆಗೆ ರೀಲ್ಸ್‌ ಮಾಡುತ್ತಿದ್ದರಿಂದ ಈ ದುರ್ಘಟನೆ ನಡೆದಿದೆ.. ಇದರ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ..

 

Share Post