National

ಅಧಿಕಾರಿಗಳ ನಿರ್ಲಕ್ಷ್ಯ: ಮಗಳ ಹೆಣವನ್ನು 10ಕಿಲೋ ಮೀಟರ್‌ ಹೊತ್ತು ಸಾಗಿದ ತಂದೆ-ಮನಕಲುಕುವ ವಿಡಿಯೋ ವೈರಲ್

ಛತ್ತೀಸ್‌ಗಡ: ಸರ್ಕಾರ ಏನೆಲ್ಲಾ ಯೋಜನೆಗಳನ್ನು ಕೊಟ್ಟರೂ ಅದು ಬಡವರ್ಗದ ಜನರಿಗೆ ಮಾತ್ರ ಸಿಗುತ್ತಿಲ್ಲ. ಹಣ ಕೊಟ್ಟವರಿಗೋ ಅಥವಾ ಅಧಿಕಾರ ಇರುವವರಿಗೆ ಮಾತ್ರ ಸರ್ಕಾರದ ಯೋಜನೆಗಳು ಬಳಕೆಯಾಗುತ್ತಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಛತ್ತೀಸ್‌ಗಡದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಮಗಳ ಹೆಣ ಸಾಗಿಸಲು ವಾಹನ ಬಾರದೆ ಕಾದು ಕಾದು ಸುಸ್ತಾಗಿ, ಹೆತ್ತ ತಂದೆ ಮಗಳ ಶವವನ್ನು ಹೆಗಲ ಮೇಲೆ ಹತ್ತು ಕಿಲೋ ಮೀಟಲರ್‌ ಹೊತ್ತು ಸಾಗಿರುವ ಮನಕಲುಕುವ ಘಟನೆ ನಡೆದಿದೆ. ವಿಡಿಯೋ ವೈರಲ್‌ ಆದ ಬಳಿಕ ಅಲ್ಲಿನ ಆರೋಗ್ಯ ಸಚಿವ ಕ್ರಮ ಕೈಗೊಂಡಿದ್ದಾರೆ.

ಲಖನ್‌ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ಸುರೇಖಾ ತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಕಾರಣ ಇಂದು ಬಾಲಕಿ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ವೈದ್ಯರು ಸಮರ್ಥನೆ ಮಾಡಿಕೊಂಡಿದ್ದು, ಬಾಲಕಿ ಆಸ್ಪತ್ರೆಗೆ ದಾಖಲಾಗುವ ಮೊದಲೇ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು, ಅಲ್ಲದೆ ಆಮ್ಲಜನಕ ಸರಿಯಾಗಿ ಸಿಗದ ಕಾರಣ ಬಾಲಕಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಿಜಾಂಶ ಏನಂದ್ರೆ ಬಾಲಕಿಗೆ ಖಾಲಿ ಹೊಟ್ಟೆಯಲ್ಲಿಯೇ ವೈದ್ಯರು ಚುಚ್ಚುಮದ್ದನ್ನು ನೀಡ್ತಿದ್ರು, ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಬಾಲಕಿ ತಂದೆ ಆರೋಪ ಮಾಡಿದ್ದಾರೆ.

ಇಂದು ಚಿಕಿತ್ಸೆ ಫಲಕಾರಿಯಾಗದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಹೆಣ ಸಾಗಿಸುವ ವಾಹನ ಕೇಳಿದ್ರೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಬಾಲಕಿ ತಂದೆ ಹೇಳಿದ್ದಾರೆ. ವೈದ್ಯರು ಮಾತ್ರ 9.30ಕ್ಕೆ ವಾಹನ ಬಂತು ಆದ್ರೆ ಅಷ್ಟರಲ್ಲಾಗಲೇ ಆತ ಮಗಳ ಹೆಣವನ್ನು ತೆಗೆದುಕೊಂಡು ಹೋದ ಎಂದು ಅಲ್ಲಿನ ಅಧಿಕಾರಿಗಳು ಸಬೂಬು ಹೇಳಿದ್ದಾರೆ. ವಿಡಿಯೋ ವೈರಲ್‌ ಆಗ್ತಿದ್ದಂತೆ ಎಚ್ಚೆತ್ತ ಅಲ್ಲಿನ ಆರೋಗ್ಯ ಸಚಿವ ಸಿಂಗ್‌ ಡಿಯೋ ಘಟನೆ ಬಗ್ಗೆ ಪರಿಶೀಲನೆ ನಡೆಸಲು ಆದೇಶಿದ್ದಾರೆ. ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಆಸ್ಪತ್ರೆಯ ವೈದ್ಯರೊಬ್ಬರನ್ನು ಅಮಾನತು ಮಾಡಿ ಆದೇಶ ಕೂಡ ಮಾಡಿದ್ದಾರಂತೆ.

Share Post