ನವಿಲು ಮಾಂಸದ ಅಡುಗೆ ತಯಾರಿಸಿ ಯೂಟ್ಯೂಬರ್!; ಕಂಬಿ ಎಣಿಸುತ್ತಿದ್ದಾನೆ ಆರೋಪಿ
ಹೈದರಾಬಾದ್; ರಾಷ್ಟ್ರೀಯ ಪಕ್ಷಿ ನವಿಲುಗಳನ್ನು ಕೊಲ್ಲುವುದು, ಅದರ ಮಾಂಸ ಸೇವನೆ ಮಾಡುವುದು ಕಾನೂನು ಪ್ರಕಾರ ಅಪರಾಧ.. ಹಾಗೆ ಮಾಡಿದರೆ ಜೈಲು ಕಟ್ಟಿಟ್ಟ ಬುತ್ತಿ.. ಇದು ತಿಳಿಯದ ಯೂಟ್ಯೂಬರ್ ಒಬ್ಬ ನವಿಲನ್ನು ಸಾಯಿಸಿ ಅದರ ಮಾಂಸದಿಂದ ಅಡುಗೆ ತಯಾರಿಸಿ, ಅದನ್ನು ಚಿತ್ರೀಕರಿಸಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.. ಇದು ಗೊತ್ತಾಗುತ್ತಿದ್ದಂತೆ ಆತನನ್ನು ಪೊಲೀಸರು ಹುಡುಕಿಕೊಂಡು ಹೋಗಿ ಅರೆಸ್ಟ್ ಮಾಡಿದ್ದಾರೆ.. ತೆಲಂಗಾಣದ ಸಿರ್ಸಿಲ್ಲಾ ನಗರದ ತಂಗಲ್ಲಾಪಲ್ಲಿ ಮಂಡಲದಲ್ಲಿ ನಡೆದಿದೆ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳ ದುರ್ಮರಣ!
ಯೂಟ್ಯೂಬರ್‌ಗೆ ನವಿಲು ಮಾಂಸ ತಿನ್ನಬಾರದು ಅಂತ ಗೊತ್ತಿಲ್ಲ ಅಂತ ಕಾಣುತ್ತೆ.. ಹಳ್ಳಿಯಲ್ಲಿ ಕ್ರೇಜ್‌ಗೆ ಅಂತ ಅಡುಗೆ ತಯಾರಿಸಿ ಅದರ ವಿಡಿಯೋ ಅಪ್‌ಲೋಡ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.. ಯೂಟ್ಯೂಬರ್ ಕೋಡಂ ಪ್ರಣಯ್ ಕುಮಾರ್ ಎಂಬಾತನೇ ಬಂಧಿತ ಆರೋಪಿ.. ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ಮೇಲೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.. ಪೊಲೀಸರಿಗೆ ಮಾಹಿತಿ ನೀಡಿದ್ದರು.. ಪೊಲೀಸರು ಹುಡುಕಿಕೊಂಡು ಹೋಗಿ ಆತ ಅಡುಗೆ ಮಾಡಿದ ಸ್ಥಳ ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ಅಲ್ಲಿ ಕಾಡು ಹಂದಿ, ಉಡ ಸೇರಿದಂತೆ ಹಲವು ಪ್ರಾಣಗಳ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ..
ಪ್ರಣಯ್ ಕುಮಾರ್ನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಲಾಗಿದೆ.. ಬಂಧಿತನ ರಕ್ತದ ಮಾದರಿ ಹಾಗೂ ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.