Cinema

ʼಲಂಕಾಸುರʼನ ಮೂಲಕ ವಿನೋದ್‌ ಪ್ರಭಾಕರ್‌ ಈಗ ನಿರ್ಮಾಪಕ

ಬೆಂಗಳೂರು : ರಾಬರ್ಟ್‌ ಯಶಸ್ಸಿನ ನಂತರ ಸ್ವಲ್ಪ ದಿನಗಳ ಬ್ರೇಕ್‌ ತೆಗೆದುಕೊಂಡಿದ್ದ ವಿನೋದ್‌ ಪ್ರಭಾಕರ್‌ ಈಗ ಒಂದು ದೊಡ್ಡ ಬ್ಯಾಂಗ್‌ನೊಂದಿಗೆ ವಾಪಸ್‌ ಬಂದಿದ್ದಾರೆ. ಲಂಕಾಸುರ ಸಿನಿಮಾದ ಮೂಲಕ ಮತ್ತೊಂದು ಇನ್ನಿಂಗ್ಸ್‌ ಆರಂಭಿಸಲು ವಿನೋದ್‌ ಸಜ್ಜಾಗಿದ್ದಾರೆ. ಇನ್ನು ಈವರಿಗೆ ಸಾಥ್‌ ನೀಡಲು ಲೂಸ್‌ ಮಾದ ಕೂಡ ಕೈ ಜೋಡಿಸಿದ್ದಾರೆ.

ಲಂಕಾಸುರ ಮೂಲಕ ವಿನೋದ್‌ ಪ್ರಭಾಕರ್‌ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮ್ಮ ಹೊಸ ನಿರ್ಮಾಣ ಸಂಸ್ಥೆಗೆ ಟೈಗರ್‌ ಟಾಕೀಸ್‌ ಎಂದು ನಾಮಕರಣ ಮಾಡಿರುವ ವಿನೋದ್‌ ಅವರ ಈ ಸಿನಿಮಾವನ್ನು ನಿರ್ದೇಶನ ಮಾಡ್ತಿರೋದು ಪ್ರಮೋದ್‌ ಕುಮಾರ್‌ ಡಿ ಎಸ್.‌

ಲೂಸ್‌ ಮಾದ ಅವರ ಪಾತ್ರ ಈ ಸಿನಿಮಾದಲ್ಲಿ ಸಾಕಷ್ಟು ಮಹತ್ವ ಪಡೆದಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ವಿನೋದ್‌ ಮತ್ತು ಯೋಗಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಶುರುವಾಗಿದೆ.

Share Post