Cinema

ತಮಿಳಿನ ಮಾರನ್‌ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ

ಬೆಂಗಳೂರು ; ತಮಿಳಿನ ಖ್ಯಾತ ನಟರಾಗಿರುವ ಧನುಷ್‌ ಅವರ ಮುಂದಿನ ಸಿನಿಮಾ ಆಗಿರುವ ಮಾರನ್‌ ಸದ್ಯದಲ್ಲೇ ಓಟಿಟಿಯಲ್ಲಿ ತೆರೆ ಕಾಣಲಿದೆ.

ಥಿಯೇಟರ್‌ ರಿಲೀಸ್‌ ಪ್ಲಾನ್‌ ಮಾಡಿದ್ದ ತಂಡ ಈಗ ಉಲ್ಟಾ ಹೊಡೆದಿದೆ. ಚಿತ್ರತಂಡ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ನಮ್ಮಿಂದ ನಿಮಗಾಗಿ ಹ್ಯಾಪಿ ವ್ಯಾಲೆಂಟೈನ್‌ ಡೇ. ಶೀಘ್ರದಲ್ಲೇ ಸಿನಿಮಾ ಡಿಸ್ನಿ ಮತ್ತು ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರಲಿದೆ ಎಂದು ಮಾಳವಿಕ ಮೋಹನನ್‌ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಧನುಷ್‌ ಅವರ ಜೊತೆಗೆ ಮಾಳವಿಕ ಮೋಹನನ್‌ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸತ್ಯಜ್ಯೋತಿ ಫಿಲಂ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಕಾರ್ತಿಕ್‌ ನರೇನ್‌ ನಿರ್ದೇಶನ ಮಾಡಿದ್ದಾರೆ.

Share Post