Cinema

ಯಶ್‌ `ಟಾಕ್ಸಿಕ್‌ʼ ಸಿನಿಮಾಗೆ ಮಹಿಳೆ ಡೈರೆಕ್ಟರ್‌, ಯಶ್‌ ಸಹ ನಿರ್ಮಾಪಕ!

ಬೆಂಗಳೂರು;ರಾಕಿಂಗ್‌ ಸ್ಟಾರ್‌ ತಮ್ಮ ಹೊಸ ಸಿನಿಮಾ ಟೈಟಲ್‌ ಘೋಷಣೆ ಮಾಡಿದ್ದಾರೆ. ಯಶ್‌ 19ನೇ ಸಿನಿಮಾದ ಹೆಸರು ʻಟಾಕ್ಸಿಕ್‌ʼ. ಈ ಸಿನಿಮಾವನ್ನು ಒಬ್ಬ ಮಹಿಳಾ ನಿರ್ದೇಶಕಿ ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಈ ಸಿನಿಮಾಗೆ ನಟ ಯಶ್‌ ಕೂಡಾ ಹೂಡಿಕೆ ಮಾಡಿದ್ದು, ಸಹ ನಿರ್ಮಾಪಕರಾಗಿದ್ದಾರೆ. 

​ಗೀತು ಮೋಹನ್ ಎಂಬ ಮಲಯಾಳಂ ನಟಿ, ನಿರ್ದೇಶಕಿ ಟಾಕ್ಸಿಕ್‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.  ಈ ಸಿನಿಮಾವನ್ನ 2025 ಏಪ್ರಿಲ್​ 10ರಂದು ರಿಲೀಸ್​ ಮಾಡಲಾಗುತ್ತದೆ ಎಂದು ಯಶ್‌ ಹೇಳಿಕೊಂಡಿದ್ದಾರೆ.

Share Post