celebrities Dish; ಸಿನಿತಾರೆಯರ ಹೆಸರಿನ ಈ ಖಾದ್ಯಗಳು ಬಲು ಜನಪ್ರಿಯ
ಮಸಾಲೆದೋಸೆ, ಈರುಳ್ಳಿ ದೋಸೆ, ಮೊಟ್ಟೆ ದೋಸೆ, ಸೆಟ್ ದೋಸೆ, ಸೆಟ್ ಮಸಾಲೆ ಹೀಗೆ ಹಲವು ದೋಸೆಗಳ ಬಗ್ಗೆ ಕೇಳಿದ್ದೇವೆ. ಆದರೆ ನಿಮಗೆ ಈ ದೀಪಿಕಾ ಪಡುಕೋಣೆ ಮತ್ತು ಚಿರು ದೋಸೆಗಳ ಬಗ್ಗೆ ಗೊತ್ತೇ..? ಎಲ್ಲಿದು ಅಂತೀರಾ..? ಈ ಸುದ್ದಿ ಓದಿದರೆ ಅಸಲಿ ವಿಷಯ ಅರ್ಥವಾಗುತ್ತದೆ. ದೀಪಿಕಾ ಪಡುಕೋಣೆ ದೋಸೆ ಎಲ್ಲರ ಬಾಯಲ್ಲಿ ನೀರೂರಿಸಿಸುತ್ತಿದೆ. ಅಮೆರಿಕದ ಆಸ್ಟಿನ್‌ನಲ್ಲಿರುವ ‘ದೋಸಾ ಲ್ಯಾಬ್ಸ್’ ಹೋಟೆಲ್‌ನಲ್ಲಿ ಕಾಳು ಕುರ್ಮಾದೊಂದಿಗೆ ತಯಾರಿಸಿದ ‘ದೀಪಿಕಾ ಪಡುಕೋಣೆ ದೋಸೆ’ಯನ್ನು ಜನವರಿ 1 ರಂದು ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅದರೊಂದಿಗೆ ಪುಣೆಯಲ್ಲಿ ಆಕೆಯ ಹೆಸರಿನಲ್ಲಿ ‘ಪರಂತ ಥಾಲಿ’ ಎಂಬ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಟ್ವೀಟ್‌ಗಳು ಬಂದಿದ್ದರು.
ಅಷ್ಟಕ್ಕೂ ದೀಪಿಕಾ ಪಡುಕೋಣೆ ಹೆಸರಲ್ಲಿ ಮಾತ್ರ ಆಹಾರ ಪದಾರ್ಥಗಳಿವೆಯಾ..? ನೋ.. ಭಾರತದ ಹಲವೆಡೆ ಹಲವು ಹೊಟೇಲ್ ಗಳಲ್ಲಿ ಒಬ್ಬರ ಹೆಸರಲ್ಲದೇ ಹಲವು ಸಿನಿಮಾ ತಾರೆಯರ ಹೆಸರಲ್ಲಿ ಫುಡ್ ಮಾರಾಟ ಮಾಡಲಾಗುತ್ತಿದೆ.. ಕೆಲವು ಸಿನಿಮಾ ತಾರೆಯರು ಸಿನಿಮಾದಲ್ಲಿ ನಟಿಸಿದ ಪಾತ್ರಗಳ ಹೆಸರಲ್ಲಿ ತಿಂಡಿ ತಿನಿಸುಗಳನ್ನೂ ಮಾಡುತ್ತಿದ್ದಾರೆ.
ಮುಂಬೈನ ನೂರ್ ಮೊಹಮ್ಮದಿ ಹೋಟೆಲ್ ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿನ ‘ಚಿಕನ್ ಸಂಜು ಬಾಬಾ’ ಅನ್ನು ಮಾರಾಟ ಮಾಡುತ್ತದೆ. 95 ವರ್ಷದ ಹೋಟೆಲ್ ಮಾಲೀಕ ಖಾಲಿದ್, ಸಂಜಯ್ ಜೊತೆಗಿನ ಒಡನಾಟದ ಸಂಕೇತವಾಗಿ ಇದಕ್ಕೆ ಈ ಹೆಸರಿಟ್ಟಿದ್ದಾರೆ. 1986 ರಲ್ಲಿ, ಸಂಜಯ್ ದತ್ ರಿಬ್ಬನ್ ಕತ್ತರಿಸಿ ಹೋಟೆಲ್‌ನ ಹೊಸದಾಗಿ ಸ್ಥಾಪಿಸಲಾದ ಕುಟುಂಬ ವಿಭಾಗವನ್ನು ಉದ್ಘಾಟಿಸಿದರು. ಆಗ ಹೋಟೆಲ್ ಮಾಲೀಕರು ಸಂಜಯ್ ಗೆ ಚಿಕನ್ ಡಿಶ್ ಬಡಿಸಿದರು. ಅಂದಿನಿಂದ ಈ ಖಾದ್ಯಕ್ಕೆ ಅವರ ಹೆಸರನ್ನು ಇಡಲಾಗಿದೆ.
ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಫೆಬ್ರವರಿ 2016 ರಲ್ಲಿ ಸಂಜಯ್ ಬಿಡುಗಡೆಯಾದಾಗ, ಈ ಹೋಟೆಲ್ ಮಾಲೀಕರು 12 ಗಂಟೆಗಳ ಕಾಲ ಸಾರ್ವಜನಿಕರಿಗೆ ಉಚಿತ ಚಿಕನ್ ಸಂಜು ಬಾಬಾ ಖಾದ್ಯವನ್ನು ವಿತರಿಸಿದರು.
ತೆಲುಗು ಚಿತ್ರರಂಗದ ನಟ ಮೆಗಾಸ್ಟಾರ್ ಚಿರಂಜೀವಿ ಹೆಸರಲ್ಲಿ ಕೂಡ ಎಣ್ಣೆ ಹಾಕದೆ ಹಬೆಯಾಡಿಸಿದ ‘ಚಿರು ದೋಸೆ’ ಮಾರಾಟ ಮಾಡುತ್ತಿದ್ದಾರೆ. ಮೈಸೂರಿನ ಚಿಕ್ಕ ಫುಡ್ ಕಾರ್ನರ್‌ನಲ್ಲಿ ಚಿರಂಜೀವಿ ಹೆಸರಿನ ಈ ದೋಸೆ ಮಾರಾಟ ಮಾಡಲಾಗುತ್ತದೆ. ಹೈದರಾಬಾದಿನ ‘ಚಟ್ನಿ’ಗಳು ‘ಚಿರಂಜೀವಿ ದೋಸೆ’ ಎಂದು ಕರೆಯಲಾಗುವ ಆವಿಯಲ್ಲಿ ಬೇಯಿಸಿದ ದೋಸೆಯನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.