ನಟಿ ಸಂಜನಾ ಗಲ್ರಾನಿಗೆ ಗಂಡು ಮಗು; ಸಹೋದರಿ ಮದುವೆ ದಿನವೇ ಹೆರಿಗೆ
ಬೆಂಗಳೂರು; ಸಹೋದರಿ ನಿಕ್ಕಿ ಗರ್ಲಾನಿ ಮದುವೆ ದಿನವೇ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಲ್ರಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಶೂಟ್, ಸೀಮಂತ ಶಾಸ್ತ್ರದ ವಿಚಾರವಾಗಿ ಸುದ್ದಿಯಾಗಿದ್ರು. ನಟಿ ಸಂಜನಾ ಗಲ್ರಾನಿ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.