Cinema

ಚುಟು ಚುಟು ಬೆಡಗಿಯ ಹಾಟ್‌ ಫೋಟೋಸ್

ಬೆಂಗಳೂರು : ಸ್ಯಾಂಡಲ್ವುಡ್‌ನ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ಆಶಿಕಾ ರಂಗನಾಥ್‌ ಅವರು ಹೊಸ ಫೋಟೋ ಶೂಟ್‌ ಮಾಡಿಸಿದ್ದಾರೆ. ಹಾಟ್‌ ಹಾಟ್‌ ಆಗಿ ಪೋಸ್‌ ಕೊಟ್ಟಿರುವ ಆಶಿಕಾ ಫೋಟೋಸ್‌ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಈ ಬೆಡಗಿ ಈಗ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿ ನಟಿ. ಕ್ರೇಜಿ ಬಾಯ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್‌ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತಂದೆ ಸಿವಿಲ್‌ ಎಂಜಿನಿಯರ್‌ , ತಾಯಿ ಸುಧಾ ಗೃಹಿಣಿ ಇನ್ನು ಅಕ್ಕ ಅನುಷಾ ರಂಗನಾಥ್‌ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸುದೀಪ್‌ ಅವರ ಪಟಾಕಿ ಪೋರಿಯೋ ಹಾಡಿನಲ್ಲಿ ಹೆಜ್ಜೆ ಹಾಕಿ ಪಡ್ಡೆಗಳಿಗೆ ಚುಟು ಚುಟು ಎಂದು ಶಾಕ್‌ ಕೊಟ್ಟಿದ್ದ ಈ ಪೋರಿ ಈಗ ಶರಣ್‌ ಅವರೊಟ್ಟಿಗೆ ಅವತಾರ ಪುರುಷ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಎಂಗೇಜ್‌ ಆಗಿರುವ ಆಶಿಕಾ ರಂಗನಾಥ್‌ ಸದಾ ಒಂದಿಲ್ಲೊಂದು ರೀಲ್ಸ್‌ ಮಾಡಿ ಸುದ್ದಿ ಆಗುತ್ತಲೇ ಇರುತ್ತಾರೆ.

Share Post