CinemaHealth

ಕ್ರಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ನಟಿ ಸಮಂತಾ

ಮುಂಬೈ; ಖ್ಯಾತ ನಟಿ ಸಮಂತಾ ಅವರು ನಾಗಚೈತನ್ಯರಿಂದ ಡಿವೋರ್ಸ್‌ ಪಡೆದ ಮೇಲೆ ಮಯೋಸೈಟಿನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಈಗಾಗಲೇ ಹಲವಾರು ಚಿಕಿತ್ಸೆಗಳನ್ನು ಪಡೆದಿದ್ದಾರೆ. ಇದೀಗ ಅವರು ಕ್ರಯೋಥೆರಪಿ ಮೊರೆ ಹೋಗಿದ್ದಾರೆ. ಸ್ವತಃ ಅವರೇ ವಿಡಿಯೋ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ನನಗೆ ದೇಹದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತಿತ್ತು. ಅದಕ್ಕಾಗಿ ನಾನು ಸ್ಟಿರಾಯ್ಡ್ಸ್‌ ತೆಗೆದುಕೊಳ್ಳುತ್ತಿದ್ದೆ. ಇದರಿಂದ ನನ್ನ ಚರ್ಮಕ್ಕೆ ತೊಂದರೆಯಾಗಿದೆ. ಹೀಗಾಗಿ ವೈದ್ಯರಾದ ಚಿನ್ಮಯಿ ಶ್ರೀಪಾದರು ನನಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತ ಸಮಂತಾ ಬರೆದುಕೊಂಡಿದ್ದಾರೆ.

 

Share Post