CinemaCrimeNational

ಡ್ರಗ್ಸ್‌ ಬಳಕೆ ಆರೋಪ; ತೆಲುಗು ನಟ ನವದೀಪ್‌ ಮನೆ ಮೇಲೆ ದಾಳಿ

ಹೈದರಾಬಾದ್‌; ಟಾಲಿವುಡ್‌ನಲ್ಲಿ ಡ್ರಗ್ಸ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಹಲವರ ಮೇಲೆ ಪ್ರಕರಣಗಳು ದಾಖಲಾಗಿವೆ. ಹೀಗಿರುವಾಗಲೇ ತೆಲುಗಿನ ಖ್ಯಾತ ಯುವ ನಟ ನವದೀಪ್‌ ಮನೆಯ ಮೇಲೆ ದಾಳಿ ನಡೆದಿದೆ. ಡ್ರಗ್ಸ್‌ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಡ್ರಗ್ಸ್‌ ನಿಯಂತ್ರಣ ದಳದ ಅಧಿಕಾರಿಗಳು ಹೋಟೆಲ್‌ ಒಂದರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಚಿತ್ರ ನಿರ್ಮಾಪಕರೂ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಹೀಗಿರುವಾಗಲೇ ನಟ ನವದೀಪ್‌ ಮನೆಯ ಮೇಲೆ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಕೂಡಾ ಹಲವು ನಟ, ನಟಿಯರ ಮೇಲೆ ಡ್ರಗ್ಸ್‌ ಸೇವನೆ ಆರೋಪ ಕೇಳಿಬಂದಿತ್ತು.

ತೆಲುಗು ಅಲ್ಲದೆ ಕನ್ನಡ, ತಮಿಳು ಸೇರಿದಂತೆ ಬಹುತೇಕ ಚಿತ್ರರಂಗಗಳಲ್ಲಿ ಈ ಆರೋಪಗಳು ಇದ್ದು, ಹಲವರು ಜೈಲುವಾಸ ಅನುಭವಿಸಿದ್ದೂ ಆಗಿದೆ.

 

Share Post