CinemaNational

ಮತ್ತೆ ಒಟ್ಟಿಗೆ ಕಾಣಿಸಿಕೊಂಡ ನರೇಶ್‌-ಪವಿತ್ರಾ ಲೋಕೇಶ್‌; ವಿಡಿಯೋ ವೈರಲ್‌

ಹೈದರಾಬಾದ್‌; ತೆಲುಗು ನಟ ನರೇಶ್‌ ಹಾಗೂ ಕನ್ನಡದ ಹಿರಿಯ ನಟಿ ಪವಿತ್ರಾ ಲೋಕೇಶ್‌ ಸಂಬಂಧದ ಬಗ್ಗೆ ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಈ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ಇರುವ ವಿಡಿಯೋ ಒಂದು ಈಗ ವೈರಲ್‌ ಆಗುತ್ತಿದೆ. ಸಿನಿಮಾ ಒಂದರ ಪ್ರಚಾರಕ್ಕಾಗಿ ನಟ ನರೇಶ್‌ ಅವರು ಪವಿತ್ರತಾ ಲೋಕೇಶ್‌ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ರೊಮ್ಯಾಂಟಿಕ್‌ ಆಗಿ ಮಾತನಾಡಿದ್ದಾರೆ. ಇಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಬಗ್ಗೆ ಹೇಳಿಕೊಂಡಿದ್ದು, ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿದೆ ಎಂದು ನರೇಶ್‌ ಹೇಳಿಕೊಂಡಿದ್ದಾರೆ.

ಖ್ಯಾತ ತೆಲುಗು ನಟ ಅಲಿ ನಿರ್ಮಿಸಿರುವ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಈಗಾಗಲೇ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ಜನ ಮೆಚ್ಚುತ್ತಿದ್ದಾರೆ ಎಂದು ನರೇಶ್‌ ಹೇಳಿಕೊಂಡಿದ್ದಾರೆ.

Share Post