Cinema

ರಜನಿ ಪುತ್ರಿ ಐಶ್ವರ್ಯಗೆ ಕೊರೊನಾ ಪಾಸಿಟಿವ್‌

ಚೆನೈ : ಇತ್ತೀಚೆಗಷ್ಟೇ ಧನುಷ್‌ ಅವರೊಂದಿಗಿನ ಮದುವೆ ಸಂಬಂಧ ಮುರಿದುಕೊಂಡಿದ್ದ  ಐಶ್ವರ್ಯ ಈಗ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಆರೋಗ್ಯದ ಸಮಸ್ಯೆಯಿಂದ ಐಶ್ವರ್ಯ ಬಳಲುತ್ತಿದ್ದಾರೆ. ಕೊರೊನಾ ಪಾಸಿಟಿವ್‌ ಬಂದಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರುದುಕೊಂಡಿದ್ದಾರೆ. ನಿನ್ನೆ ರಾತ್ರಿ ಮಂಗಳವಾರ ಅವರು ಈ ಕುರಿತು ಪೋಸ್ಟ್‌ ಮಾಡಿದ್ದಾರೆ.

ರಜನಿ ಪುತ್ರಿ ಐಶ್ವರ್ಯ, “ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್​ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್​ ಧರಿಸಿ. ವ್ಯಾಕ್ಸಿನ್​ ಪಡೆದು ಹುಷಾರಾಗಿರಿ” ಎಂದು ಬರೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐಶ್ವರ್ಯ ಅವರಿಗೆ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

Share Post