Cinema

ಸುನಿಲ್‌ ಗ್ರೋವರ್‌ಗೆ ಹೃದಯ ಶಸ್ತ್ರ ಚಿಕಿತ್ಸೆ

ಮುಂಬೈ : ಜನಪ್ರಿಯ ಹಾಸ್ಯ ಕಲಾವಿದ ಸುನಿಲ್‌ ಗ್ರೋವರ್‌ ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹಿಂದಿಯ ‘ದಿ ಕಪಿಲ್ ಶರ್ಮಾ ಶೋʼ ಐಕಾನ್‌ ಆಗಿದ್ದ ಸುನಿಲ್‌ ಗ್ರೋವರ್‌ ಅವರು ಇಂದು ನಗರದ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಹಾಸ್ಯ ಪಾಪ್‌ ಸೆಲೆಬ್ರಿಟಿಯಾಗಿರುವ ಭಯಾನಿ ಅವರು ಸುನಿಲ್‌ ಅವರ ಆರೋಗ್ಯದ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸುನಿಲ್‌ ಗ್ರೋವರ್‌ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಅವರು ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ ಎಂದಯ ಭಯಾನಿ ಹೇಳಿದ್ದಾರೆ.

ಹಲವಾರು ಬಾಲಿವುಡ್‌ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ ಸುನಿಲ್‌ ಗ್ರೋವರ್‌ ಅವರು ತಮ್ಮ ಆರೋಗ್ಯದ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ.

 

View this post on Instagram

 

A post shared by Viral Bhayani (@viralbhayani)

Share Post