Health

India Covid Update : 24 ಗಂಟೆಯಲ್ಲಿ 1.61ಲಕ್ಷ ಕೇಸ್‌ ; ಗಣನೀಯ ಇಳಿಕೆ

ನವದೆಹಲಿ : ದೇಶದಾದ್ಯಂತ ಕೋವಿಡ್‌ ಮೂರನೇ ಅಲೆಯ ಸೋಂಕು ಕಡಿಮೆ ಆಗುತ್ತಿದೆ. ಕಳೆದ 24 ಗಂಟೆಯಲ್ಲಿ 1.61,386 ಹೊಸ ಪ್ರಕರಣಗಳಷ್ಟೇ ದಾಖಲಾಗಿದೆ. ಈ ಮುಂಚೆ ದಿನವೊಂದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಕೇಸಸ್‌ ಬರುತ್ತಿತ್ತು. ಇದೇ ಅವಧಿಯಲ್ಲಿ 1733 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಂಗಳವಾರಕ್ಕೆ ಇದನ್ನು  ಹೋಲಿಸಿದರೆ ಶೇ. ೩ರಷ್ಟು ಇಳಿಕೆ ಕಂಡುಬಂದಿದೆ. ಸದ್ಯ ದೇಶದಲ್ಲಿ 17,43,059 ಸಕ್ರಿಯ ಪ್ರಕರಣಗಳಿವೆ. ಇನ್ನು ದೈನಂದಿನ ಪಾಸಿಟಿವಿಟಿ ರೇಟ್‌ 9.26% ರಷ್ಟಿದೆ.

ಇನ್ನು ಓಮೈಕ್ರಾನ್‌ ಅನ್ನು ಹಗುರವಾಗಿ ಪರಿಗಣಿಸಬಾರದು ಎಂದು WHO ಎಚ್ಚರಿಕೆ ನೀಡಿದೆ. ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಸಡಿಲಗೊಲಿಸುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕು ಏರದಂತೆ ನೋಡಿಕೊಳ್ಳ ಬೇಕಾಗಿದೆ

Share Post