ಸುನೀಲ್ ಶೆಟ್ಟಿ ಮಗನಿಗೆ ದಢ್ಕನ್ ರೀಮೇಕ್ ಮಾಡುವಾಸೆ
ಮುಂಬೈ : ನಟ ಅಹಾನ್ ಶೆಟ್ಟಿ ತನ್ನ ತಂದೆಯ ದಢ್ಕನ್ ಮತ್ತು ಬಾರ್ಡರ್ ಸಿನಿಮಾಗಳ ರೀಮೇಕ್‌ನಲ್ಲಿ ನಟಿಸಲು ಬಯಸಿದ್ದಾರೆ. 2000ನೇ ಇಸವಿಯಲ್ಲಿ ತೆರೆಕಂಡ ದಢ್ಕನ ಚಿತ್ರವು ಸೂಪರ್ ಹಿಟ್ ಆಗಿತ್ತು. ಶಿಲ್ಪಾ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು.
ಇನ್ನು 1997ರಲ್ಲಿ ತೆರೆಕಂಡು ಮೆಗಾ ಹಿಟ್ ಆಗಿದ್ದ ಬಾರ್ಡರ್ ಸಿನಿಮಾವನ್ನು ಕೂಡ ಸುನೀಲ್ ಅವರ ಮಗ ರೀಮೇಕ್ ಮಾಡಲು ಬಯಸಿದ್ದಾರೆ. ಪಾಕಿಸ್ತಾನ ಭಾರತ ನಡುವಿನ ಯುದ್ಧದ ಸಮಯದಲ್ಲಿ ನಡೆದ ನಿಜ ಸನ್ನಿವೇಶಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು.
ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಇಂಟರ್ವ್ಯೂನಲ್ಲಿ ಅಹಾನ್ ಶೆಟ್ಟಿ ಈ ವಿಷಯವನ್ನು ಹೇಳಿದ್ದರು. ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ನಾಲ್ಕು ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ ಎಂದು ಅಹಾನ್ ತಿಳಿಸಿದ್ದರು. ತಡಾಪ್ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದ ಅಹಾನ್ ಈಗ ಸಾಕಷ್ಟು ಬ್ಯುಸಿಯಾಗಿದ್ದಾರೆ.