ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಬಾಲಿವುಡ್ ಬೆಡಗಿ ಕರೀನಾ
ದೆಹಲಿ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹಾಗೂ ಅಮೃತ ಅರೋರ್ ಅವರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಆದರೂ ಕೂಡ ಅವರು ಕೋವಿಡ್ ನಿಯಮ ಉಲ್ಲಂಘಿಸಿ ವಿವಿಧ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ನಟಿಯರ ಸಂಪರ್ಕಕ್ಕೆ ಬಂದವರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಮುಂಬೈ ಬೃಹತ್ ನಗರಪಾಲಿಕೆ ಆದೇಶ ಮಾಡಿದೆ.ಜ್ವರ, ನೆಗಡಿ ಇತರೆ ಕೊರೊನಾ ಲಕ್ಷಣಗಳಿರುವ ವ್ಯಕ್ತಿ ಐಸೋಲೇಶನ್‌ಗೆ ಒಳಗಾಗಬೇಕು ಎಂದು ಬಿಎಂಸಿ ಆದೇಶ ಹೊರಡಿಸಿದೆ. ಹಾಗಿದ್ದರೂ ಈ ನಟಿಯರು ಕಳೆದ ಒಂದು ವಾರದಿಂದ ಹಲವು ಪಾರ್ಟಿಗಳಿಗೆ ಹಾಜರಾಗಿದ್ದಾರೆ. ಸ್ನೇಹಿತೆಯರಾಗಿರುವ ಕರೀನಾ ಕಪೂರ್ ಹಾಗೂ ಅಮೃತ್ ಅರೋರಾ, ತಮ್ಮ ಅಕ್ಕಂದಿರಾದ ಮಲೈಕಾ ಅರೋರಾ ಹಾಗೂ ಕರಿಶ್ಮಾ ಕಪೂರ್ ಅವರೊಟ್ಟಿಗೆ ರಿಯಾ ಕಪೂರ್ ಮನೆಯಲ್ಲಿ ಕ್ರಿಸ್‌ಮಸ್ ಪಾರ್ಟಿ ಮಾಡಿದ್ದರು. ಅದರ ನಂತರ ಕರಣ್ ಜೋಹರ್ ಮನೆಯಲ್ಲಿ ವೀಕೆಂಡ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಆಲಿಯಾ ಭಟ್, ಅರ್ಜುನ್ ಕಪೂರ್ ಹಾಗೂ ರಣ್ಬೀರ್ ಕಪೂರ್ ಸಹ ಪಾಲ್ಗೊಂಡಿದ್ದರು.ಹೀಗಾಗಿ ಅವರ ಸಂಪರ್ಕಕ್ಕೆ ಬಂದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ.