ಕುಸಿದು ಬಿದ್ದ ಕಲ್ಲಿದ್ದಲು ಗಣಿ: ಹಲವರು ಸಿಲುಕಿರುವ ಶಂಕೆ
ಜಾರ್ಖಾಂಡ್: ಅಕ್ರಮ ಕಲ್ಲು ಗಣಿಗಾರಿಕೆ ವೇಳೆ ಕಲ್ಲಿದ್ದಲು ಗಣಿ ಕುಸಿದು ಬಿದ್ದಿರುವ ದುರದೃಷ್ಟಕರ ಘಟನೆ ಮಂಗಳವಾರ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ. ಕುಸಿದು ಬಿದ್ದಿರುವ ಗಣಿ ಸ್ಥಳದಲ್ಲಿ ಅನೇಕ ಜನರು ಸಿಲುಕಿರುವ ಮಾಹಿತಿಯಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಧನ್‌ಬಾದ್ ಎಸ್‌ಎಸ್‌ಪಿ ನೀಡಿರುವ ಮಾಹಿತಿ ಪ್ರಕಾ, “ಜಾರ್ಖಂಡ್‌ನ ಧನ್‌ಬಾದ್‌ನ ನಿರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಇಸಿಎಲ್ ಕಲ್ಲಿದ್ದಲು ಗಣಿಯಲ್ಲಿನ ಒಂದು ಭಾಗ ಕುಸಿದು ಬಿದ್ದಿದ್ದು, ಹಲವರು ಸಿಲುಕಿರುವ ಮಾಹಿತಿಯಿದೆ”. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರ ಸಾವು ನೋವುಗಳ ಬಗ್ಗೆ ಖಚಿತವಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೊದಲ ಘಟನೆಯು ಸೋಮವಾರ, ಜನವರಿ 31 ರಂದು ನಿರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ECL) ನ ಕಪಸಾರ ಹೊರಗುತ್ತಿಗೆ ಯೋಜನೆಯಲ್ಲಿ ನಡೆದಿದೆ. ಎರಡನೇ ಘಟನೆ ಸೋಮವಾರ ರಾತ್ರಿ ನಿರ್ಸಾದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನ (ಬಿಸಿಸಿಎಲ್) ಚಾಚ್ ವಿಕ್ಟೋರಿಯಾದಲ್ಲಿ ನಡೆದಿದೆ, ಮೂರನೇ ಘಟನೆ ಮಂಗಳವಾರ ಬೆಳಗ್ಗೆ ಪಂಚೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿನಾಥಪುರದ ಇಸಿಎಲ್‌ನ ಓಪನ್ ಕಾಸ್ಟ್ ಗಣಿಗಳಲ್ಲಿ ಸಂಭವಿಸಿದೆ ಎನ್ನಲಾಗಿದೆ.
ಗಣಿಗಾರಿಕೆಯಲ್ಲಿ ತೊಡಗಿರುವ ಹೊರಗುತ್ತಿಗೆ ಕಂಪನಿಯ ಇಸಿಎಲ್ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜ್‌ಮೆಂಟ್ ಕಾರ್ಮಿಕರ ಭದ್ರತೆ ಬಗ್ಗೆ ಸರಿಯಾದ ರೀತಿಯಲ್ಲಿ ಇಲ್ಲ. ಹಾಗಾಗಿ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಎಸ್‌ಡಿಎಂಗೆ ಸೂಚಿಸಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಸಿಎಲ್ ಜಿಎಂ, ಕಪಾಸರ ಕಾಲೇರಿ ಪ್ರಾಜೆಕ್ಟ್ ಅಧಿಕಾರಿಗಳು, ಮುಗ್ಮಾ ಏರಿಯಾ ಮ್ಯಾನೇಜರ್ ಮತ್ತು ಹೊರಗುತ್ತಿಗೆ ಕಂಪನಿ ಅಧಿಕಾರಿಗಳ ವಿರುದ್ಧ ಮೈನ್ಸ್ ಇನ್ಸ್‌ಪೆಕ್ಟರ್ ಪಿಂಟು ಕುಮಾರ್ ಅವರು ನಿರ್ಸಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.