CrimeNational

ಇಎಸ್‌ಐ ಆಸ್ಪತ್ರೆಯಲ್ಲಿ ಬೆಂಕಿ ದುರಂತ; ಓರ್ವ ರೋಗಿ ಸಾವು!

ಪಶ್ಚಿಮ ಬಂಗಾಳ; ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಬೆಂಕಿ ಅವಘಡ ಸಂಭವಿಸಿದೆ.. ಕೋಲ್ಕತ್ತಾದ ಸೀಲ್ದಾಹ್‌ ಇಎಸ್‌ಐ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭಾರೀ ಅಗ್ನಿ ದುರಂತ ನಡೆದಿದ್ದು, ಘಟನೆಯಲ್ಲಿ ರೋಗಿಯೊಬ್ಬ ಸಾವನ್ನಪ್ಪಿದ್ದಾನೆ.. ನಂತರ ಬಂದ ಅಗ್ನಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಈ ಬೆಂಕಿ ಅವಘಡ ನಡೆದಿದೆ.. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಭಾರೀ ಅವಘಡ ಸಂಭವಿಸಿದೆ.. ಹೀಗಾಗಿ ರೋಗಿಗಳು ಮನೆಗಳಿಗೆ ತೆರಳಿದ್ದಾರೆ.. ಐಸಿಯುನಲ್ಲಿದ್ದ ಕೆಲ ರೋಗಿಗಳನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಐಸಿಯುನಲ್ಲಿದ್ದ ಒಬ್ಬ ರೋಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..
ಸುಮಾರು 80 ಜನರನ್ನು ರಕ್ಷಿಸಲಾಗಿದೆ. ದಟ್ಟ ಹೊಘೆ ಆವರಿಸಿದ್ದರಿಂದಾಗಿ ಹಲವರು ಉಸಿರಾಟದ ತೊಂದರೆ ಅನುಭವಿಸಿದ್ದಾರೆ.. ಸಾವನ್ನಪ್ಪಿರುವ ರೋಗಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.. 54 ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.. ಉಳಿದ ರೋಗಿಗಳು ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ..

Share Post