National

ಸಿಆರ್‌ಪಿಎಫ್‌ ಬಂಕರ್‌ ಮೇಲೆ ಬಾಂಬ್‌ ಎಸೆತ; ಬುರ್ಖಾಧಾರಿ ಮಹಿಳೆಯಿಂದ ಕೃತ್ಯ

ಶ್ರೀನಗರ; ಜಮ್ಮು-ಕಾಶ್ಮೀರ ಸೋಪೋರ್‌ನಲ್ಲಿ ಮಹಿಳೆಯೊಬ್ಬರು ಸಿಆರ್‌ಪಿಎಫ್‌ ಬಂಕರ್‌ ಮೇಲೆ ಬಾಂಬ್‌ ದಾಳಿ ನಡೆಸಿದ್ದಾಳೆ. ಬುರ್ಕಾ ಧರಿಸಿಕೊಂಡು ಬಂದಿದ್ದ ಮಹಿಳೆಯೊಬ್ಬರು ಬಂಕರ್‌ ಮೇಲೆ ಬಾಂಬ್‌ ಎಸೆದು ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ದೃಶ್ಯವನ್ನು ಖಾಸಗಿ ಸುದ್ದಿಸಂಸ್ಥೆಯೊಂದು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಬಾಂಬ್‌ ಹಿಡಿದುಕೊಂಡು ಬಂದ ಮಹಿಳೆಯ ಬಂಕರ್‌ ಮೇಲೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಆದ್ರೆ, ಬಾಂಬ್‌ ಸ್ಫೋಟವಾಗದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ. ಬಾಂಬ್‌ ಎಸೆದ ಮಹಿಳೆಯ ಮಾಹಿತಿ ಸಿಕ್ಕಿದೆ. ಆಕೆಯನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

Share Post