ಮಳೆಗೆ ಶೆಡ್ ಗೋಡೆ ಕುಸಿತ; ವೃದ್ಧೆ ದಾರುಣ ಸಾವು!
ಯಾದಗಿರಿ; ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಶೆಡ್ ಗೋಡೆಯೊಂದು ಕುಸಿದುಬಿದ್ದಿದ್ದು, ವೃದ್ಧೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ವೃದ್ಧೆ ಗುಂಜಲಮ್ಮ ಮನೆಯಲ್ಲಿ ಮಲಗಿದ್ದಾಗ ಗೋಡೆ ಆಕೆಯ ಮೇಲೆ ಕುಸಿದುಬಿದ್ದಿದೆ.. ಇದರಿಂದಾಗಿ 68 ವರ್ಷದ ಗುಂಜಲಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಯಾದಗಿರಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.. ಇದರಿಂದಾಗಿ ಜನರು ತತ್ತರಿಸಿದ್ದಾರೆ.. ಇದರಿಂದ ಗೋಡೆ ನೆನೆದಿದ್ದು, ಕುಸಿದುಬಿದ್ದಿದೆ..
ವೃದ್ಧೆಯ ಜೊಗೆ ಸಹೋದರ ಕೂಡಾ ಮಲಗಿದ್ದ.. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..