ಕಾಂಗ್ರೆಸ್‌ನ ಎಲ್ಲಾ 99 ಸಂಸದರನ್ನು ಅನರ್ಹಗೊಳಿಸಿ; ಕೋರ್ಟ್ ಮೆಟ್ಟಿಲೇರಿದ ವಕೀಲ!
ನವದೆಹಲಿ; ಹತ್ತು ವರ್ಷಗಳ ನಂತರ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನ ದಕ್ಕಿಸಿಕೊಂಡಿದೆ.. ಈ ಬಾರಿ 99 ಸ್ಥಾನಗಳು ಬಂದಿದ್ದರಿಂದ ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ.. ಹೀಗಿರುವಾಗಲೇ ಕಾಂಗ್ರೆಸ್ ಪಡೆದುಕೊಂಡಿರುವ ಅಷ್ಟೂ ಲೋಕಸಭಾ ಸ್ಥಾನಗಳನ್ನು ಅನರ್ಹಗೊಳಿಸುವಂತೆ ಕೋರ್ಟ್ ಮೊರೆ ಹೋಗಲಾಗಿದೆ.. ವಕೀಲರೊಬ್ಬರು ಈ ಬಗ್ಗೆ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ..
ಪ್ರಚಾರದ ಸಮಯದಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 8500 ರೂಪಾಯಿ ಸಹಾಯಧನ ಹಾಗೂ ನಿರುದ್ಯೋಗಿಗಳು ನಿರುದ್ಯೋಗ ಭತ್ಯೆ ಸೇರಿ ಹಲವು ಯೋಜನೆಗಳನ್ನು ನೀಡುವುದಾಗಿ ಆಮಿಷ ಒಡ್ಡಿದೆ.. ರಾಹುಲ್ ಗಾಂಧಿಯವರು ಪ್ರಚಾರ ಮಾಡುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಟಾಕಟ್ ಕಟಾಕಟ್ ಅಂತ ನಿಮ್ಮ ಅಕೌಂಟ್‌ಗೆ ಹಣ ಬೀಳುತ್ತೆ ಎಂದು ಆಮಿಷವೊಡ್ಡಿದ್ದರು.. ಇದರಿಂದಾಗಿ ಜನ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್’ ಮೂಲಕ ಮತದಾರರಿಗೆ ಲಂಚದ ಆಮಿಷ ಒಡ್ಡಲಾಗಿದೆ.. ಹೀಗಾಗಿ ಸೆಕ್ಷನ್ 146, RPA ಅಡಿಯಲ್ಲಿ ತನಿಖೆ ನಡೆಸಬೇಕು. ಅವರ ಸಂಸತ್ ಸ್ಥಾನಗಳನ್ನು ಅಸಿಂಧುಗೊಳಸಬೇಕೆಂದು ವಕೀಲ ವಿಭೋರ್ ಆನಂದ್ ಎಂಬುವವರು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ ಮತ್ತು ಎಲ್ಲಾ ಕಾಂಗ್ರೆಸ್ ಸದಸ್ಯರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಕಲಂ 146 ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲು ಭಾರತ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಆನಂದ್ ಒತ್ತಾಯಿಸಿದ್ದಾರೆ.