BengaluruPolitics

ಏಪ್ರಿಲ್‌ 8ಕ್ಕೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; ಅಚ್ಚರಿ ಅಭ್ಯರ್ಥಿಗಳಿರ್ತಾರೆ ಎಂದ ಸಿಎಂ

ಬೆಂಗಳೂರು; ಏಪ್ರಿಲ್‌ 8ಕ್ಕೆ ಕೇಂದ್ರ ಸಮಿತಿ ಪರಿಶೀಲಿಸಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಣಾಡಿದ ಅವರು, ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ಇರಲಿದೆ ಎಂದು ಹೇಳಿ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಈ ಬಾರಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಈ ಕಾರಣದಿಂದಾಗಿ ಕೆಲವು ಕ್ಷೇತ್ರಗಳು ಆಶ್ಚರ್ಯಕರ ಫಲಿತಾಂಶ ನೀಡುತ್ತವೆ ಎಂದು ಸಿಎಂ ಬೊಮ್ಮಾಯಹಿ ಇದೇ ವೇಳೆ ತಿಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಬಿಜೆಪಿ ಹೊಸ ಪ್ರಯೋಗ ನಡೆಸಿತ್ತು. ಅಲ್ಲೆಲ್ಲಾ ನಾನು ಯಶಸ್ವಿಯಾಗಿದ್ದೇವೆ. ಬಿಜೆಪಿ ಉತ್ತಮ ಫಲಿತಾಂಶ ಕೂಡಾ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲೂ ಕೂಡಾ ಇಂತಹ ಪ್ರಯೋಗ ಮಾಡಲಿದ್ದೇವೆ. ಇದ್ರಿಂದ ಕೆಲ ಕ್ಷೇತ್ರಗಳಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Share Post