Cinema

ತಾಯಿಯಾಗುವ ಖುಷಿಯಲ್ಲಿ ಬಹುಭಾಷಾ ನಟಿ ನಮಿತಾ; ಫೋಟೋ ವೈರಲ್‌

ಚೆನ್ನೈ: ಬಹುಭಾಷಾ ನಟಿ ನಮಿತಾ ತಾಯಿಯಾಗುತ್ತಿದ್ದಾರೆ. ಅವರೇ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಅಪ್‌ಲೋಡ್‌ ಮಾಡುವ ಮೂಲಕ ಬಹಿರಂಗ ಮಾಡಿದ್ದಾರೆ. 41 ಹುಟ್ಟುಹಬ್ಬ ಆಚರಣೆ ವೇಳೆ ನಮಿತ ಈ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ನಮಿತಾ 41ನೇ ವಸಂತಕ್ಕೆ ಕಾಲಿಟ್ಟಿರುವುದಕ್ಕೆ ಸಿನಿಮಾರಂಗದ ದಿಗ್ಗಜರು, ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ.ವಿವಿಧ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ವಿಶೇಷ ಪ್ರಗ್ನೆನ್ಸಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಭಿಮಾನಿಗಳು ಸೇರಿದಂತೆ ಆಪ್ತರು ನಮಿತಾಗೆ ಶುಭಾಶಯ ಕೋರುತ್ತಿದ್ದಾರೆ.

ನಮಿತಾ, ಕೆಲವೇ ಸಿನಿಮಾಗಳಲ್ಲಿ ಅಭಿನಯ ಮಾಡಿದರೂ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಕನ್ನಡದಲ್ಲಿ ರವಿಚಂದ್ರನ್‌ ಜೊತೆ, ನೀಲಕಂಠ, ಹೂ, ಇಂದ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ.

Share Post