CrimeNational

ಬಾಲಕಿಯ ಸ್ತನ, ಸೊಂಟ ಮುಟ್ಟಿದ ಡೋಂಗಿ ಬಾಬಾ!

ನವದೆಹಲಿ; ಅನಾರೋಗ್ಯದ ಹಿನ್ನೆಲೆಯಲ್ಲಿ ಪೋಷಕರ ಜೊತೆ ಶಾಸ್ತ್ರ ಕೇಳಲು ಬಂದಿದ್ದ ಬಾಲಕಿಯ ಸ್ತನ ಹಾಗೂ ಸೊಂಟ ಮುಟ್ಟಿ ಡೋಂಗಿ ಬಾಬ ವಿಕೃತ ವರ್ತನೆ ತೋರಿದ್ದಾನೆ.. ಬಾಲಕಿ ಮುಟ್ಟಬೇಡ ಎಂದರೂ ಆಕೆ ಬಲವಂತವಾಗಿ ಹಾಗೆ ಮಾಡಿದ್ದಾನೆ.. ಪೋಷಕರು ಅಲ್ಲೇ ಇದ್ದರೂ ಡೋಂಗಿ ಬಾಬಾಗೆ ಭಯಬಿದ್ದು ಸುಮ್ಮನೆ ಕುಳಿತಿದ್ದದ್ದು ವಿಪರ್ಯಾಸದ ಸಂಗತಿ.. ಇಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಆ ನಟ ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟ!; ನಟಿ ಅಳಲು!

Nehr_who?ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.. ಬಾಲಕಿಗೆ ಅನಾರೋಗ್ಯ ಕಾಡುತ್ತಿತ್ತು.. ವೈದ್ಯರಲ್ಲಿ ತೋರಿಸಿದರೂ ಗುಣವಾಗಿರಲಿಲ್ಲ.. ಹೀಗಾಗಿ ಪೋಷಕರು ಆಕೆಯನ್ನು ಬಾಬಾ ಒಬ್ಬನ ಬಳಿ ಕರೆದುಕೊಂಡು ಬಂದಿದ್ದರು.. ಆತ ಪೋಷಕರನ್ನ ಪಕ್ಕದಲ್ಲೇ ಕೂರಿಸಿಕೊಂಡು ಬಾಲಕಿಯ ಸ್ತಗಳನ್ನು ಮುಟ್ಟಿದ್ದಾನೆ.. ಸೊಂಟವನ್ನು ಹಿಡಿದುಕೊಂಡು ಒತ್ತಿದ್ದಾರೆ.. ಇದಕ್ಕೆ ಬಾಲಕಿಗೆ ಇರಿಸುಮುರಿಸಾಗಿದೆ.. ಆದರೂ ಕೂಡಾ ಬಾಬಾ ಬಿಟ್ಟಿಲ್ಲ.. ಇತ್ತ ಪೋಷಕರು ಕೂಡಾ ಸುಮ್ಮನೆ ಕೂತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ..

ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!

Share Post