CinemaCrime

ನಟಿ ಹರ್ಷಿಕಾ ಪೂಣಚ್ಚ ಮೇಲೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

ಬೆಂಗಳೂರು; ನಟಿ ಹರ್ಷಿಕಾ ಪೂಣಚ್ಚ ಅವರ ಪತಿಯ ಮೇಲೆ ಅನ್ಯ ಕೋಮಿನ‌ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೋ ಒಂದು ಕೂಡಾ ವೈರಲ್ ಆಗಿದೆ. ಹರ್ಷಿಕಾ ಪೂಣಚ್ಚ ಪತಿ, ನಟ ಭುವನ್ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

​ಕಳೆದ ರಾತ್ರಿ ಬೆಂಗಳೂರಿನ ಫ್ರೆಜರ್ ಟೌನ್​ನ ರೆಸ್ಟೋರೆಂಟ್ ಒಂದರ ಬಳಿ ಈ ಘಟನೆ ನಡೆದಿದೆ.. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಊಟಕ್ಕೆ ತೆರಳಿದ್ದರು. ಈ ವೇಳೆ ಈ ಘಟನೆ ನಡೆದಿದೆ.

ಇಬ್ಬರೂ ಊಟ ಮುಗಿಸಿ ವಾಪಸ್ ಬರುವಾಗ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಕೆಲವರು ಕ್ಯಾತೆ ತೆಗೆದಿದ್ದಾರೆ. ಕಾರು ತೆಗೆಯುವಾಗ ಜಗಳ ನಡೆದಿದ್ದು ಈ ವೇಳೆ ಹಲ್ಲೆ ಮಾಡಲಾಗಿದೆ. ಈ ವೇಳೆ ನಟ ಭುವನ್ ಕೊರಳಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಕನ್ನಡದಲ್ಲಿ ಮಾತಾಡ್ತಿದ್ದರಿಂದ ಗಲಾಟೆ ಜೋರು ಮಾಡಿದ್ದಾರೆ ಎನ್ನಲಾಗಿದೆ.

Share Post