CinemaCrimeNational

ನಟ ಕಮಲ್‌ ಹಾಸನ್‌ ಮಾಜಿ ಪ್ರೇಯಸಿಗೆ 25 ಕೋಟಿ ರೂ. ಮೋಸ..!

ಚೆನ್ನೈ; ಖ್ಯಾತ ನಟಿ ಹಾಗೂ ನಟ ಕಮಲ್‌ ಹಾಸನ್‌ ಅವರ ಮಾಜಿ ಪ್ರೇಯಸಿ ಗೌತಮಿ ಅವರಿಗೆ 25 ಕೋಟಿ ರೂಪಾಯಿ ಮೋಸ ಆಗಿದೆಯಂತೆ. ಈ ಬಗ್ಗೆ ಸ್ವತಃ ಗೌತಮಿಯವರೇ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಅಳಗಪ್ಪನ್ ಕಂಪನಿಯ ಮುಖ್ಯಸ್ಥರು ನನಗೆ 25 ಕೋಟಿ ರೂಪಾಯಿ ಮೋಸ ಮಾಡಿದ್ದಾರೆ ಎಂದು ಗೌತಮಿ ದೂರು ನೀಡಿದ್ದಾರೆ. 

ತಮಿಳುನಾಡಿನ ಶ್ರೀಪರೆಂಬದೂರ್‌ನಲ್ಲಿ ನಟಿ ಗೌತಮಿಗೆ ಸೇರಿದ 46 ಎಕರೆ ಜಮೀನಿದ್ದು, ಅದನ್ನು ಮಾರಾಟ ಮಾಡಲು ಅವರು ನಿರ್ಧಾರ ಮಾಡಿದ್ದರು. ಈ ಕಾರಣಕ್ಕಾಗಿ ಗೌತಮಿ ಅವರು, ಅಳಗಪ್ಪನ್ ಕಂಪನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಇದನ್ನು ಅಳಗಪ್ಪನ್‌ ಕಂಪನಿ ದುರುಪಯೋಗ ಪಡಿಸಿಕೊಂಡಿದೆ ಎಂದು ನಟಿ ಗೌತಮಿ ದೂರಿದ್ದಾರೆ. ಇದರ ಜೊತೆಗೆ ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿ, ನನಗೆ ಕೇವಲ 62 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಗೌತಮಿ ಆರೋಪ ಮಾಡಿದ್ದಾರೆ. ನನ್ನ ಸಹಿ ಫೋರ್ಜರಿ ಮಾಡಲಾಗಿದ್ದು, ಪ್ರಶ್ನೆ ಮಾಡಿದರೆ ಜೀವಬೆದರಿಕೆ ಹಾಕಿದ್ದಾರೆ ಎಂದು ಗೌತಮಿ ಹೇಳಿದ್ದಾರೆ.

 

Share Post