ಆಕೆ ಮರ್ಮಾಂಗದಲ್ಲಿ ಅಡಗಿಸಿಟ್ಟುಕೊಂಡಿದ್ದಳು 1 ಕೆಜಿ ಡ್ರಗ್ಸ್..!
ಬೆಂಗಳೂರು; ವಿದೇಶಿ ಮಹಿಳೆಯೊಬ್ಬರು ಮರ್ಮಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಬಂದು ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಕೀನ್ಯಾ ಮಹಿಳೆಯನ್ನು ಬಂಧಿಸಿದ್ದು, ಆಕೆಯ ಮರ್ಮಾಂಗದಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 1 ಕೆಜಿ 144 ಗ್ರಾಂ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕೀನಾ ಮಹಿಳೆ ಮರ್ಮಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಬರುತ್ತಿದ್ದಾಳೆಂದು ಕಸ್ಟಮ್ಸ್ ಅಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಆಕೆ ಸಿಕ್ಕಿಬಿದ್ದಿದ್ದಾಳೆ. ಆರೋಪಿ ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಬಾದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಳು.
ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯ ತಪಾಸಣೆ ಮಾಡಿದಾಗ ಆಕೆ, 1 ಕೆಜಿ 144 ಗ್ರಾಂ ತೂಕದ 12 ಕೋಟಿ ರೂ. ಮೌಲ್ಯದ ಕೊಕೇನ್ ನ್ನು ಮರ್ಮಾಂಗದಲ್ಲಿ ಅಡಗಿಸಿಟ್ಟುಕೊಂಡಿದ್ದಳು ಎಂದು ತಿಳಿದುಬಂದಿದೆ. ಕ್ಯಾಪ್ಸೂಲ್ ಮಾದರಿಯಲ್ಲಿ ಕೊಕೇನ್ ಅಡಗಿಸಿಟ್ಟುಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.