ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದೇನೆ : ನಟಿ ತ್ರಿಷಾ ಟ್ವೀಟ್
ನಟಿ ತ್ರಿಷಾ ಕೃಷ್ಣನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿ ವಾರಕ್ಕಿಂತಲೂ ಹೆಚ್ಚು ದಿನ ಕಳೆದಿದೆ. ಈಗ ಅವರು ಟ್ವೀಟ್ ಮೂಲಕ ವಿಷಯ ಬಹಿರಂಗಪಡಿಸಿದ್ದಾರೆ. ನ್ಯೂಇಯರ್‌ಗೂ ಕೆಲ ದಿನಗಳ ಹಿಂದೆ ನನಗೆ ಸೋಂಕಿನ ಗುಣ ಲಕ್ಷಣಗಳು ಕಾಣಿಸಿಕೊಂಡಿತ್ತು. ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಅತ್ಯಂತ ದುಃಖದ ವಾರಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತ್ರಿಷಾ ಚೇತರಿಸಿಕೊಳ್ಳುತ್ತಿದ್ದಾರೆ.
ನನಗೆ ರೋಗದ ಎಲ್ಲಾ ಗುಣಲಕ್ಷಣಗಳು ಕಂಡು ಬಂದಿದೆ. ಎಲ್ಲಾ ರೀತಿಯ ಸೇಫ್ಟಿ ಹಾಗು ಪ್ರಿಕಾಷನರಿಗಳನ್ನು ನಾನು ಫಾಲೋ ಮಾಡ್ತಿದ್ದೆ. ಆದರೂ ಈ ರೀತಿ ಆಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಆದಷ್ಟು ಬೇಗ ಮನೆಗೆ ಮರಳಲು ಆಶಿಸುತ್ತೇನೆ. ದಯವಿಟ್ಟು ನೀವೆಲ್ಲರೂ ಸುರಕ್ಷಿತವಾಗಿರಿ ಎಂದು ತ್ರಿಷಾ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಮೂರನೇ ಅಲೆ ತೀವ್ರವಾಗಿರುವ ಕಾರಣ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದೆ. ನಮ್ಮ ಜಾಗರೂಕತೆಯಲ್ಲಿ ನಾವು ಇರಬೇಕಾಗಿದೆ
— Trish (@trishtrashers) January 7, 2022