Cinema

ಹಾಸ್ಯ ಕಲಾವಿದ ಕಪಿಲ್‌ ಶರ್ಮ ಬಯೋಪಿಕ್‌

ಮುಂಬೈ : ಕಪಿಲ್‌ ಶರ್ಮ ಅತ್ಯದ್ಭುತ ಹಾಸ್ಯಗಾರ. 2007ರಲ್ಲಿ ‘ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​’ನಲ್ಲಿ ಗೆದ್ದಿದ್ದರು. ನಂತರ ಅವರು 2013ರಲ್ಲಿ ಶುರು ಮಾಡಿದ ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌ ಶೋ ಚಿರಪರಿಚಿತ ಆಗಿ ಹೋಗಿತ್ತು. ಟಿ.ಆರ್.ಪಿ ಅಂದ್ರೆ ಕಪಿಲ್‌ ಶೋ ಎನ್ನುವ ರೀತಿ ಆಗಿ ಬಿಟ್ಟಿತ್ತು. ನಂತರ ದಿ ಕಪಿಲ್‌ ಶರ್ಮ ಶೋ ಆರಂಭಿಸಿದರು. ಅದು ಕೂಡ ಉತ್ತಮವಾಗಿ ಮೂಡಿ ಬರುತ್ತಿದೆ.

ಈಗ ಕಪಿಲ್‌ ಶರ್ಮ ಅವರ ಬಯೋಪಿಕ್‌ ಬರಲಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಕಪಿಲ್‌ ಶರ್ಮ ಅವರ ಕುರಿತು ಸಿನಿಮಾ ತಯಾರಾಗಲಿದೆ, ಸಿನಿಮಾ ಟೈಟಲ್‌ ‘ಫನ್ಕಾರ್​’  ಎಂದು ಚಿತ್ರತಂಡ ತಿಳಿಸಿದೆ. ಇದು ಉರ್ದು ಪದವಾಗಿದ್ದು, ಫನ್ಕಾರ್‌ ಎಂದರೆ ಕಲಾವಿದ ಎಂಬ ಅರ್ಥ ಕೊಡುತ್ತದೆ.

ಕಪಿಲ್‌ ಶರ್ಮ ಅವರ ಆರಂಭದ ದಿನಗಳು ಹೇಗಿತ್ತು, ಅವರ ವೃತ್ತಿ ಜೀವನ ಹೇಗಿತ್ತು ಎಂದು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದು ಮೃಗದೀಪ್​ ಸಿಂಗ್​ ಲಂಬಾ ತಿಳಿಸಿದ್ದಾರೆ.

ಸಿನಿಮಾ ಕುರಿತು ಇನ್ನಷ್ಟು ಅಪ್ಡೇಟ್ಸ್‌ ಸದ್ಯದಲ್ಲೇ ಸಿಗಲಿದೆ.

Share Post