National

ಜಲ್ಲಿಕಟ್ಟು : ಒಂದು ಸಾವು , 80 ಮಂದಿಗೆ ಗಾಯ

ಚೆನೈ : ತಮಿಳುನಾಡಿನ ಮಧುರೈನ ಆವನಿಯಪುರಂನಲ್ಲಿ ಪ್ರದೇಶದಲ್ಲಿ ಪೊಂಗಲ್‌ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ, 80 ಮಂದಿ ಗಾಯಗೊಂಡಿದ್ದಾರೆ. ಬಾಲ ಮುರುಗನ್‌ ಎಂಬ 18ವರ್ಷದ ಹುಡುಗ ಮೃತಪಟ್ಟಿರುವ ದುರ್ದೈವಿ

ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ ಗಾಯಗೊಂಡವರಲ್ಲಿ 38 ಗೂಳಿ ಪಳಗಿಸುವವರು, 24 ಗೂಳಿ ಮಾಲೀಕರು ಹಾಗೂ 18 ಪ್ರೇಕ್ಷಕರು ಸೇರಿದ್ದಾರೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಒಂದು ಗ್ರಾಮೀಣ ಕ್ರೀಡೆ ಅಷ್ಟೇ ಅಲ್ಲ, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಒಂದು ಸಂಪ್ರದಾಯವಾಗಿದೆ, ಸಾಕಷ್ಟು ಜನರು ಸೇರಿ ಇದನ್ನು ನಡೆಸುತ್ತಾರೆ. ಕೆಲವು ಕಾಲ ಕೋರ್ಟ್‌ ತಡೆಯಾಜ್ಞೆ ನೀಡಿತ್ತಾದರೂ ನಂತರ ಅನುಮತಿ ನೀಡಿತ್ತು.

Share Post