ಮೇಕೆದಾಟು ಪಾದಯಾತ್ರೆ : 25 ಪೊಲೀಸರಿಗೆ ಕೊರೊನಾ ಸೋಂಕು
ಕೋಲಾರ : ಕಾಂಗ್ರೆಸ್ ಅವರು ಮೇಕೆದಾಟು ಪಾದಯಾತ್ರೆ ಶುರು ಮಾಡಿದಾಗಿನಿಂದಲೂ ಕೊರೊನಾ ಆತಂಕ ಇತ್ತು. ಸಮುದಾಯಕ್ಕೆ ಹಬ್ಬಿರುವ ಸೋಂಕು ತ್ವರಿತ ವೇಗದಲ್ಲಿ ವ್ಯಾಪಿಸುತ್ತಿದ್ದರೂ ಕೂಡ ಕಾಂಗ್ರೆಸ್‌ನವರು ಪಾದಯಾತ್ರೆ ಬಿಡಲಿಲ್ಲ. ಈಗ ಭದ್ರತೆ ನೀಡಲು ಹೋಗಿದ್ದ ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ಪಾದಯಾತ್ರೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಕೂಡ ಡಿಕೆಶಿ ನೇತೃತ್ವದ ಪಾದಯಾತ್ರೆ ನಿಂತಿರಲಿಲ್ಲ, ಕೋರ್ಟ್ ಆದೇಶ ಬಂದ ನಂತರವಷ್ಟೇ ಪಾದಯಾತ್ರೆಯನ್ನು ಮೊಟುಕುಗೊಳಿಸಲಾಯಿತು.
ಪಾದಯಾತ್ರೆಯ ಸಲುವಾಗಿ ಬಂದೋಬಸ್ತ್ ನೀಡಲು ಹಲವು ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಕೋಲಾರದಿಂದ ಬಂದಿದ್ದ ಪೊಲೀಸರ ಪೈಕಿ 25 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಕುಟುಂಬಗಳು ಆತಂಕದಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದರೂ ಅಚ್ಚರಿ ಪಡುವಂತಿಲ್ಲ