BusinessPolitics

ಭಾನುವಾರ ಮೈಸೂರಿಗೆ ಮೋದಿ; ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಮೈಸೂರು; ನಿನ್ನೆಯಷ್ಟೇ ಆನ್‌ಲೈನ್‌ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದ ಪ್ರಧಾನಿ ಮೋದಿ, ಭಾನುವಾರ ನೇರವಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್‌ 30ರಂದು ಅವರು ಮೈಸೂರಿಗೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈಸೂರಿನ ಗನ್‌ ಹೌಸ್‌ ವೃತ್ತದಿಂದ ಮೋದಿಯವರ ರೋಡ್‌ ಶೋ ನಡೆಯಲಿದೆ. ಈ ವೇಳೆ ಮೋದಿಯವರಿಗೆ ವಿಶೇಷ ಸ್ವಾಗತ ನೀಡಲಾಗುತ್ತದೆ. ಮೈಸೂರಿನ ವಿಶೇಷತೆಗಳನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ. ಗನ್‌ ಹೌಸ್‌ನಿಂದ ಶುರುವಾಗುವ ರೋಡ್‌ ಶೋ, ಸಂಸ್ಕೃತ ಶಾಲೆ ವೃತ್ತ. ಕೆಆರ್‌ ವೃತ್ತ, ಆಯುರ್ವೇದಿಕ್‌ ಆಸ್ಪತ್ರೆ ವೃತ್ತ, ಆರ್‌ಎಂಸಿ ವೃತ್ತ, ಃಯವೇ ವೃತ್ತದ ಮಾರ್ಗವಾಗಿ ಮಿಲೇನಿಯಂ ವೃತ್ತದವರೆಗೆ ರೋಡ್‌ ಶೋ ಇರುತ್ತದೆ.

ಸುಮಾರು ನಾಲ್ಕು ಕಿಲೋ ಮೀಟರ್‌ ರೋಡ್‌ ಶೋ ನಡೆಯಲಿದ್ದು, ಜನರು ರಸ್ತೆಯ ಇಕ್ಕೆಲೆಗಳಲ್ಲಿ ನಿಂತುಕೊಳ್ಳು ವ್ಯವಸ್ಥೆ ಮಾಡಲಾಗಿದೆ. ಬಿಗಿ ಭದ್ರತೆ ಕೂಡಾ ಕಲ್ಪಿಸಲಾಗುತ್ತಿದೆ.

Share Post