DistrictsPolitics

ವಿಜಯೇಂದ್ರ ನನಗೆ ಹಣ ಕೊಡಲು ಬಂದಿದ್ದರು; ಎಚ್‌.ವಿಶ್ವನಾಥ್‌ ಬಾಂಬ್‌..!

ಮೈಸೂರು; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನಗೆ ಹಣ ಕೊಡಲು ಬಂದಿದ್ದರು. ಈ ವಿಚಾರವನ್ನು ನಾನು ಬಾಂಬೆ ಡೇಸ್‌ ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಬಾಂಬ್‌ ಸಿಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಾಂಬೆ ಡೇಸ್‌ ಪುಸ್ತಕ ಪ್ರಿಂಟ್‌ ಆಗುತ್ತಿದೆ. ಯಾವಾಗ ಬಿಡುಗಡೆ ಅನ್ನೋದನ್ನ ಶೀಘ್ರದಲ್ಲೇ ಹೇಳುತ್ತೇನೆ ಎಂದು ಹೇಳಿದ್ದಾರೆ.

ವಿ.ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ, ನಾನು ವಿಜಯೇಂದ್ರ ಅವರ ಅಪಾರ್ಟ್​ಮೆಂಟ್​ನಲ್ಲಿ ಮಾತನಾಡಿದ್ದೆವು, ಆಗ ನನಗೆ ವಿಜಯೇಂದ್ರ ಹಣ ಕೊಡಲು ಬಂದಿದ್ದರು. ಬಳಿಕ ಏನಾಯ್ತು ಎಂಬುದನ್ನೆಲ್ಲ ಬಾಂಬೆ ಡೇಸ್ ಪುಸ್ತಕದ ಮೊದಲ ಅಧ್ಯಾಯದಲ್ಲೇ ಬರೆದಿದ್ದೇನೆ. ಡಿಟಿಪಿ ಆಗುವ ಹಂತದಲ್ಲೇ ಪತ್ರಿಕೆಯೊಂದು ಅದನ್ನು ಪ್ರಕಟಿಸಿಯೂ ಬಿಟ್ಟಿದೆ. ಪುಸ್ತಕ ರೆಡಿ ಆಗುತ್ತಿದೆ, ಯಾವಾಗ ಪ್ರಿಂಟ್ ಆಗುತ್ತೆ, ಯಾವಾಗ ಬರುತ್ತೆ ಅನ್ನೋದೆಲ್ಲ ಶೀಘ್ರದಲ್ಲೇ ಹೇಳುತ್ತೇನೆ ಎಂದು ವಿಶ್ವನಾಥ್‌ ಹೇಳಿದ್ದಾರೆ.

 

Share Post