ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ 64 ರನ್ಗಳ ಇನಿಂಗ್ಸ್ ಜಯ, ಸರಣಿ ಗೆಲುವು
ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 64 ರನ್ಗಳ ಇನ್ನಿಂಗ್ಸ್ನಿಂದ ಜಯ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 218 ರನ್ ಗಳಿಸಿದ್ದರೆ ಭಾರತ 477 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 195 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಜೋ ರೂಟ್ ಏಕಾಂಗಿಯಾಗಿ 84 ರನ್ ಗಳಿಸಿದರು.
ಭಾರತದ ಬೌಲರ್ಗಳು ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದ್ದಾರೆ. ಆರ್ ಅಶ್ವಿನ್ ಐದು ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಐದು ಟೆಸ್ಟ್ಗಳ ಸರಣಿಯಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿದೆ. ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಊಟದ ವಿರಾಮದ ವೇಳೆಗೆ 23 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು.
ಭಾರತದ ಮೊದಲ ಇನ್ನಿಂಗ್ಸ್ ಸ್ಕೋರ್ಗಿಂತ ಇಂಗ್ಲೆಂಡ್ ಇನ್ನೂ 156 ರನ್ ಹಿಂದಿದೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದರು. ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಜ್ಯಾಕ್ ಕ್ರಾಲಿ (0), ಬೆನ್ ಡಕೆಟ್ (2), ಒಲಿ ಪೋಪ್ (19) ಮತ್ತು ಸಹ ನಾಯಕ ಬೆನ್ ಸ್ಟೋಕ್ಸ್ (2) ಅಶ್ವಿನ್ಗೆ ವಿಕೆಟ್ ಪಡೆದರು. ಬೈರ್ಸ್ಟೋವ್ (39) ಅವರನ್ನು ಕುಲದೀಪ್ ಔಟ್ ಮಾಡಿದರು.
ಜೋ ರೂಟ್ (35 ಬ್ಯಾಟಿಂಗ್) ಮತ್ತು ಬೆನ್ ಫೋಕ್ಸ್ (1 ಬ್ಯಾಟಿಂಗ್) ಕ್ರೀಸ್ನಲ್ಲಿದ್ದಾರೆ. ಇದಕ್ಕೂ ಮೊದಲು 473/8 ಓವರ್ನೈಟ್ ಸ್ಕೋರ್ನೊಂದಿಗೆ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 477 ರನ್ಗಳಿಗೆ ಆಲೌಟ್ ಆಗಿತ್ತು.
ಈ ಮೂಲಕ ಭಾರತಕ್ಕೆ 259 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ದೊರಕಿತು. ಈ ಪಂದ್ಯದಲ್ಲಿ ಕುಲದೀಪ್ ಅವರ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ನಲ್ಲಿ 700 ವಿಕೆಟ್ಗಳ ಮೈಲಿಗಲ್ಲು ಪಡೆದ ಮೊದಲ ವೇಗಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.