ಬಜೆಟ್ ಪ್ರಭಾವದಿಂದ ಏರುಗತಿಯಲ್ಲಿ ಷೇರುಪೇಟೆ
ಮುಂಬೈ : ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಮೂಲಸೌಕರ್ಯ ವಲಯದ ಮೇಲೆ ಹೆಚ್ಚಿನ ಹೂಡಿಕೆ ಇರುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 848 ಅಂಶ ಏರಿಕೆ ಕಂಡಿತ್ತು. ಇಂದು 696 ಅಂಶ ಹೆಚ್ಚಳ ದಾಖಲಿಸಿದೆ.
ಬುಧವಾರ ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್ 500 ಅಂಶಗಳು ಏರಿಕೆ ಕಂಡಿತು ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 17700 ಅಂಶಗಳ ಗಡಿ ದಾಟಿತು. ಹಣಕಾಸು ಮತ್ತು ತಂತ್ರಜ್ಞಾದ ವಲಯದ ಷೇರುಗಳ ಗಳಿಕೆಯ ಕಾರಣ, ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ ಶೇ 1.18ರಷ್ಟು ಹೆಚ್ಚಳವಾಗಿ 59,558.33 ಅಂಶ ತಲುಪಿದರೆ, ನಿಫ್ಟಿ 203.15 ಅಂಶ ಏರಿಕೆಯಾಗಿ 17780 ಮುಟ್ಟಿತು.