ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಫ್ಯಾಷನ್ ಮೋಹ; ಚಿಲ್ಲೋಸಫಿ ರಹಸ್ಯವೇನು..?
ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಯಾರಿಗೆ ಗೊತ್ತಿಲ್ಲ ಹೇಳಿ.. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆದ ಮೇಲೆ ಅವರ ಮಗಳು ಐಶ್ವರ್ಯಾ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ.. ಈ ವೇಳೆ ಅವರು ಧರಿಸುವ ವಿವಿಧ ವಿನ್ಯಾಸದ ಬಟ್ಟೆಗಳು ಎಲ್ಲರ ಗಮನ ಸೆಳೆಯುತ್ತವೆ.. ಅಷ್ಟೇ ಅಲ್ಲ, ವಿನೂತನ ಶೈಲಿಯ ಬಟ್ಟೆಗಳನ್ನು ಧರಿಸಿದ ಫೋಟೋಗಳನ್ನು ಐಶ್ವರ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.. ಮೊದಲು ಡಿ.ಕೆ.ಶಿವಕುಮಾರ್ ಮಗಳಾದ ಗಮನ ಸೆಳೆಯುತ್ತಿದ್ದ ಐಶ್ವರ್ಯಾ, ಇತ್ತೀಚಿನ ದಿನಗಳಲ್ಲಿ ಅವರ ವಿನೂತನ ವಿನ್ಯಾಸದ ಬಟ್ಟೆಗಳ ಕಾರಣದಿಂದ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ…
ಫ್ಯಾಷನ್ ಪ್ರಿಯರ ಕಣ್ಣು ಕುಕ್ಕುವ ಈ ಬಟ್ಟೆಗಳ ಬಗ್ಗೆ ಸ್ವತಃ ಐಶ್ವರ್ಯಾ ಅವರೇ ಮಾತನಾಡಿದ್ದಾರೆ… ಬಟ್ಟೆ ಅನ್ನೋದು ಒಬ್ಬ ವ್ಯಕ್ತಿ ಸ್ವಯಂ ಅಭಿವ್ಯಕ್ತಿ ಎಂದು ಐಶ್ವರ್ಯಾ ನಂಬಿದ್ದಾರಂತೆ.. ಅಂದಹಾಗೆ, ಐಶ್ವರ್ಯಾ ಅವರು ಈಗ ಉದ್ಯಮಿ ಕೂಡಾ ಹೌದು.. ಅವರು, ದೇಶದಾದ್ಯಂತ ಇರುವ ಸಾಂಪ್ರದಾಯಿಕ ನೇಕಾರರು ಹಾಗೂ ಬಣ್ಣಗಾರರಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.. ಐಶ್ವರ್ಯಾ ಅವರು ಇಬ್ಬರು ಮಹಿಳಾ ಪಾಲುದಾರರ ಜೊತೆ ಸೇರಿ 2018ರಲ್ಲೇ ಚಿಲ್ಲೋಸಫಿ ಎಂಬ ಬಟ್ಟೆ ಬ್ರಾಂಡ್ ಸಂಸ್ಥೆಯನ್ನು ಕಟ್ಟಿದ್ದಾರೆ.. ಈ ಬಟ್ಟೆಗಳ ವಿನ್ಯಾಸಗಳು ಮತ್ತು ಕಲ್ಪನೆಗಳು ಹೆಣ್ತನ, ಸಮಾನತೆಯ ಮೇಲೆ ನಿಂತಿದೆ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ..
ಚಿಲ್ಲೊಸಫಿ ಬ್ರಾಂಡ್‌ನೊಂದಿಗೆ ನನ್ನ ವ್ಯಕ್ತಿತ್ವ ಪ್ರತಿಬಿಂಬಿಸುತ್ತದೆ.. ಜೊತೆಗೆ ನನಗೆ ಶಕ್ತಿ ತುಂಬುವಂತಹ ಉಡುಪುಗಳನ್ನು ನಾನು ಈ ಕಂಪನಿ ಮೂಲಕ ಕಂಡುಕೊಂಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಹೇಳಿಕೊಂಡಿದ್ದಾರೆ. ಚಿಲ್ಲೋಸಫಿ ಅನ್ನೋದು ಕೇವಲ ಉಡುಪುಗಳನ್ನು ನೀಡೋದಿಲ್ಲ, ಉತ್ತಮ ಮನಸ್ಥಿತಿಯನ್ನು ನೀಡುತ್ತದೆ ಅನ್ನೋದು ಐಶ್ವರ್ಯಾ ಅಭಿಪ್ರಾಯ..
ಚಿಲ್ಲೊಸೊಫರ್ ಕ್ಲಬ್‌ಗೆ ಎಲ್ಲಾ ಮಹಿಳೆಯರು ಸೇರಿಕೊಳ್ಳಬೇಕು.. ಇಲ್ಲಿ ನಾವು ನಮ್ಮ ಅನನ್ಯ ಶೈಲಿಯ ಬಟ್ಟೆಗಳನ್ನು ನೀಡುತ್ತೇವೆ. ನಿಮಗೆ ಬೇಕಾದ ಆಯ್ಕೆ ಸಿಗುತ್ತದೆ.. ಅಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಸ್ವಯಂ-ಅಭಿವ್ಯಕ್ತಿ ಕೂಡಾ ನಿಮ್ಮದಾಗುತ್ತದೆ.. ಇಲ್ಲಿ ಫ್ಯಾಷನ್ ಸಬಲೀಕರಣದ ಬಗ್ಗೆ ತಿಳಿಯುತ್ತದೆ. ಒಂದೇ ಮನಸ್ಸಿನ ವ್ಯಕ್ತಿತ್ವವನ್ನು ನೀವು ಕಂಡುಕೊಳ್ಳಬಹುದು ಎಂದು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ..
2018ರ ಮೊದಲು ಐಶ್ವರ್ಯಾ ಅವರು ಉಡುಪುಗಳ ಬಗ್ಗೆ ಅಷ್ಟೇನೂ ವಿಶೇಷ ಕಾಳಜಿ ವಹಿಸುತ್ತಿರಲಿಲ್ಲ.. ಆದ್ರೆ ಚಿಲ್ಲೋಸಫಿ ಬ್ರಾಂಡ್ ಶುರು ಮಾಡಿದ ಮೇಲೆ ಫ್ಯಾಷನ್ ಹಾಗೂ ವಿನ್ಯಾಸಗಳ ಬಗ್ಗೆ ಅವರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.. ಹೀಗಾಗಿ ಅವರ ಡ್ರೆಸ್ ಸೆನ್ಸ್ ಬದಲಾಗಿದೆ.. ಈ ಮೂಲಕ ಐಶ್ವರ್ಯಾ ಅವರು ಇತ್ತೀಚಿನ ದಿನಗಳಲ್ಲಿ ಅವರು ಧರಿಸುವ ಉಡುಪುಗಳ ಕಾರಣದಿಂದ ಗಮನ ಸೆಳೆಯುತ್ತಿದ್ದಾರೆ..