BusinessEconomy

ಅಂಬಾನಿ ಆಸ್ತಿ ಸಂಪೂರ್ಣ ಖಾಲಿ ಮಾಡಲು ಎಷ್ಟು ವರ್ಷ ಬೇಕಾಗುತ್ತೆ..?

ಮುಂಬೈ; ಇತ್ತೀಚೆಗೆ ಮುಖೇಶ್‌ ಅಂಬಾನಿಯವರು ತಮ್ಮ ಪುತ್ರ ಅನಂತ್‌ ಅಂಬಾನಿಗೆ ಮದುವೆ ಮಾಡಿದರು.. ಈ ಅದ್ದೂರಿ ಮದುವೆಗೆ ಸುಮಾರು 6000 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋದು ಅಂದಾಜು.. ಈ ಹಣ ಮುಖೇಶ್‌ ಅಂಬಾನಿಯವರ ಆಸ್ತಿಯಲ್ಲಿ ಕೇವಲ 0.5 ಪರ್ಸೆಂಟ್‌ ಕೂಡಾ ಇಲ್ಲವಂತೆ.. ಅಂದರೆ 6 ಸಾವಿರ ಕೋಟಿ ರೂಪಾಯಿ ಮುಖೇಶ್‌ ಅಂಬಾನಿಗೆ ಲೆಕ್ಕವೇ ಇಲ್ಲ.. ಕೆಲವೇ ದಿನಗಳಲ್ಲಿ ಅಷ್ಟು ಹಣ ಅವರಿಗೆ ಸಂಪಾದನೆಯಾಗಿಬಿಡುತ್ತದೆ.. ಹಾಗಾದರೆ ಮುಖೇಶ್‌ ಅಂಬಾನಿ ಬಳಿ ಎಷ್ಟು ಆಸ್ತಿ ಇದೆ..? ಅವರ ಬಳಿ ಇರುವ ಹಣ ಖರ್ಚು ಮಾಡಬೇಕಾದರೆ ಎಷ್ಟು ವರ್ಷ ಬೇಕಾಗುತ್ತದೆ..? ಈ ಬಗ್ಗೆ ನೋಡೋಣ ಬನ್ನಿ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ರಿಲಾಯನ್ಸ್‌ ಇಂಡಸ್ಟ್ರೀಸ್‌ ಮಾಲೀಕರಾಗಿರುವ ಮುಖೇಶ್‌ ಅಂಬಾನಿಯವರು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ 11ನೇ ಸ್ಥಾನದಲ್ಲಿದ್ದಾರೆ.. ಇವರ ಒಟ್ಟು ಆಸ್ತಿಯ ಮೌಲ್ಯದ 10.21 ಲಕ್ಷ ಕೋಟಿ ರೂಪಾಯಿ. 2024ರ ಆರಂಭದಿಂದ ಇಲ್ಲಿಯವರೆಗೆ ಮುಖೇಶ್‌ ಅಂಬಾನಿಯವರ ಆಸ್ತಿ 1.98 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟು ಹೆಚ್ಚಾಗಿದೆ ಎಂದು ಬ್ಲೂಮ್‌ ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ವರದಿ ಹೇಳುತ್ತೆ.. ಆದ್ರೆ ಅಂಬಾನಿಯವರ ಮಗನ ಮದುವೆಗೆ ಖರ್ಚಾಗಿರುವ ಕೇಲವ 5 ಸಾವಿರ ಕೋಟಿ ರೂಪಾಯಿ..

ಇದನ್ನೂ ಓದಿ; ಭಾರಿ ಮಳೆಗೆ ಮನೆ ಕುಸಿತ; ಮಹಿಳೆ, ಅವಳಿ ಮಕ್ಕಳು ದುರ್ಮರಣ!

ಅಂದಹಾಗೆ, ಕೂತು ತಿಂದರೆ ಬೆಟ್ಟ ಇದ್ದರೂ ಕರಗಿ ಹೋಗುತ್ತೆ ಅನ್ನೋ ಮಾತಿದೆ.. ಹಾಗಾದ್ರೆ, ಅಂಬಾನಿ ಕುಟುಂಬ ಕೂತು ತಿಂದರೆ ಸದ್ಯ ಅವರ ಬಳಿ ಇರುವ ಆಸ್ತಿ ಪೂರ್ತಿ ಖಾಲಿಯಾಗಬೇಕಾದರೆ ಎಷ್ಟು ದಿನ ಹಿಡಿಯುತ್ತದೆ ಎಂಬುದನ್ನು ನೋಡೋಣ.. ಮುಖೇಶ್‌ ಅಂಬಾನಿಯವರ ಕುಟುಂಬದ ದಿನದ ಖರ್ಚು 3 ಕೋಟಿ ರೂಪಾಯಿ ಎಂದು ಅಂದಾಜು ಮಾಡೋಣ.. ಹಾಗೆ ಲೆಕ್ಕ ಹಾಕಿದರೆ ಅವರ ಬಳಿ ಇರುವ 10.21 ಲಕ್ಷ ಕೋಟಿ ರೂಪಾಯಿ ಖರ್ಚಾಗಬೇಕಾದರೆ ಒಟ್ಟು 3 ಲಕ್ಷದ 40 ಸಾವಿರದ 379 ದಿನಗಳ ಬೇಕಾಗುತ್ತದೆ.. ಅಂದರೆ ವರ್ಷಕ್ಕೆ 365 ದಿನಗಳು, ಹೀಗಾಗಿ ವರ್ಷದ ಲೆಕ್ಕದಲ್ಲಿ ಲೆಕ್ಕ ಹಾಕೋದಾದರೆ ಅಂಬಾನಿ ಆಸ್ತಿಯ ಬೆಟ್ಟ ಕರಗೋದಕ್ಕೆ ಬರೋಬ್ಬರಿ 932 ವರ್ಷದ 6 ತಿಂಗಳು ಬೇಕಾಗುತ್ತದೆ..

ಇದನ್ನೂ ಓದಿ; ಹಳಿ ತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲು 15 ಬೋಗಿ; ಇಬ್ಬರ ದುರ್ಮರಣ!

ಅಷ್ಟೇ ಅಲ್ಲ, ಆಸ್ತಿ ಮೌಲ್ಯ ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ.. ಅದನ್ನೂ ಲೆಕ್ಕ ಹಾಕಿದರೆ, ಇನ್ನೂ 100 ರಿಂದ 200 ವರ್ಷಕ್ಕೆ ಬೇಕಾಗುವಷ್ಟು ಆಸ್ತಿಯಾಗುತ್ತದೆ..

Share Post